This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

international News

75 ಮನೆ 47 IAS ಅಧಿಕಾರಿಗಳು – ಪುಟ್ಟ ಗ್ರಾಮದಲ್ಲಿನ ಸಾಧಕರ ಕುರಿತು ಒಂದು ಅವಲೋಕನ

WhatsApp Group Join Now
Telegram Group Join Now

ಉತ್ತರಪ್ರದೇಶ –

ಸಾಮಾನ್ಯವಾಗಿ ಮನಸ್ಸು ಮಾಡಿದರೆ ಏನೇಲ್ಲಾ ಸಾಧನೆ ಮಾಡಬಹುದು ಎಂಬೊದಕ್ಕೆ ಈ ಪುಟ್ಟ ಗ್ರಾಮವೇ ಸಾಕ್ಷಿ. ಪುಟ್ಟದಾದ ಈ ಒಂದು ಗ್ರಾಮ ದಲ್ಲಿ 75 ಮನೆಗಳಿವೆ. ಚಿಕ್ಕದಾದ ಈ ಒಂದು ಊರಿನಲ್ಲಿ 45 ಐಎಎಸ್‌ ಅಧಿಕಾರಿಗಳಿದ್ದಾರೆ‌.

ಹೌದು ಯಾಕೆಂದರೆ ಒಂದು ಊರು ಅಂದ್ರೆ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತದೆ, ಅದೇ ನಿಟ್ಟಿನಲ್ಲಿ ಇಲ್ಲೊಂದು ಪುಟ್ಟ ಗ್ರಾಮ ಆದ್ರೆ ಈ ಗ್ರಾಮದ ಬಗ್ಗೆ ತಿಳಿದುಕೊಂಡರೆ ಹೆಮ್ಮೆ ಅನಿಸುತ್ತದೆ, ಯಾಕೆಂದರೆ ಈ 75 ಮನೆ ಹೊಂದಿರೋ ಪುಟ್ಟ ಗ್ರಾಮದಲ್ಲಿ 47 ಜನ ಐಎಎಸ್ ಅಧಿಕಾರಿಯಾಗಿದ್ದಾರೆ ಅಂದ್ರೆ ಹೆಮ್ಮೆಯ ವಿಷಯ

ಹೌದು ಇಂಥಹ ಸಾಧನೆ ಮಾಡಿದರೆ ಆ ಗ್ರಾಮ ವಿಶೇಷವಾದದ್ದು ಅಲ್ಲವೇ? ಅಷ್ಟಕ್ಕೂ ಈ ಗ್ರಾಮ ಯಾವುದು ಇಲ್ಲಿನ ವಿಶೇಷತೆ ಏನು ಅನ್ನೋದರ ಬಗ್ಗೆ ನೋಡೊದಾದರೆ

75 ಮನೆಗಳನ್ನು ಹೊಂದಿರುವಂತಹ ಈ ಪುಟ್ಟ ಗ್ರಾಮ ಹೆಸರು ಮಧೋಪಟ್ಟಿ ಉತ್ತರಪ್ರದೇಶದ ಜಾನ್ಪೂರ್ ಜಿಲ್ಲೆಯಲ್ಲಿ. 1914 ರಲ್ಲಿ ಮುಸ್ತಫಾ ಹುಸೇನ್ ಎಂಬ ವ್ಯಕ್ತಿ ಆ ಗ್ರಾಮದ ಮೊದಲ ಐಎಎಸ್ ಅಧಿಕಾರಿಯಾಗಿದ್ದರು ಅಂದಿನಿಂದ ಇಂದಿನವರೆಗೂ 47 ಜನ ಐಎಎಸ್ ಅಧಿಕಾರಿ ಗಳನ್ನು ಭಾರತ ದೇಶಕ್ಕೆ ಸೇವೆ ಸಲ್ಲಿಸಲು ಕೊಟ್ಟ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ.

ಮುಸ್ತಫಾ ಹುಸೇನ್ ಅನ್ನೋ ವ್ಯಕ್ತಿ 1914 ರಲ್ಲಿ ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಯಲ್ಲಿ ಪಾಸಾದರು. ನಂತರ ಪ್ರಕಾಶ್ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆದರು. ಅಲ್ಲಿಂದ ಊರಿನ ವಿದ್ಯಾವಂತರೆಲ್ಲ ಅವರ ದಾರಿಯಲ್ಲಿ ಸಾಗುತ್ತಿದ್ದಾರೆ.

ಮತ್ತೊಂದು ವಿಶೇಷತೆ ಏನು ಅಂದ್ರೆ ಅದೇ ಗ್ರಾಮದಲ್ಲಿ ಒಂದೇ ಮನೆಯ ಸಹೋದರರು ಐಎಎಸ್ ಅಧಿಕಾರಿಯಾಗಿದ್ದಾರೆ ವಿನಯ್ ಕುಮಾರ್ ಸಿಂಗ್, ಛತ್ರಪಾಲ್ ಸಿಂಗ್, ಅಜಯ್ ಕುಮಾರ್ ಸಿಂಗ್, ಶಶಿಕಾಂತ್ ಸಿಂಗ್. ಅಷ್ಟೇ ಅಲ್ಲದೆ ಈ ಗ್ರಾಮದ ಬಹುತೇಕ ಜನರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ ಅನ್ನೋದನ್ನ ತಿಳಿಯಲಾಗುತ್ತದೆ.

ಇನ್ನು ಈ ಗ್ರಾಮದ ಮಕ್ಕಳು ಚಿಕ್ಕವರಿಂದಲೇ ದೊಡ್ಡ ಅಧಿಕಾರಿಯಾಗಬೇಕು ಅನ್ನೋ ಕನಸನ್ನು ಬೆಳೆಸಿಕೊಂಡು ಓದಿನಲ್ಲಿ ಮುಂದಿರುತ್ತಾರೆ, ಹತ್ತನೆಯ ತರಗತಿಯಿಂದಲ್ಲೇ ಐಎಎಸ್ ಗುರಿಯಾಗಿಸಿಕೊಂಡು ಪುಸ್ತಕಗಳು, ಗೈಡ್’ಗಳನ್ನು ಓದುತ್ತಾರೆ ಎಂದು ಆ ಊರಿನ ಶಿಕ್ಷಕರಾದ ಅರವಿಂದ್ ಕುಮಾರ್’ರವರು ಸಂದರ್ಶನ ವೊಂದರಲ್ಲಿ ತಿಳಿಸಿದ್ದಾರೆ. ಇನ್ನು ಈ ಗ್ರಾಮಕ್ಕೆ ಐಎಎಸ್ ಅಧಿಕಾರಿಗಳ ಗ್ರಾಮವೆಂದು ಕರೆಯಲಾಗುತ್ತದೆ.

ಏನೇ ಆಗಲಿ ಪುಟ್ಟದಾದ ಗ್ರಾಮವು ಇಡಿ ದೇಶವೆ ಮರಳಿ ತಿರುಗಿ ನೋಡುವಂತೆ ಮಾಡಿದ್ದು ದೊಡ್ಡ ಮಾತಾಗಿದ್ದು ನಿಜಕ್ಕೂ ಪುಟ್ಟ ಗ್ರಾಮ ಇತರರಿಗೆ ಮಾದರಿಯಾಗಿದೆ. ಇನ್ನೂ ಮುಖ್ಯವಾಗಿ ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ, ಇದರಿಂದ ಬೇರೆಯವರಿಗೂ ಕೂಡ ಮಾದರಿಯಾಗಲಿದೆ.


Google News

 

 

WhatsApp Group Join Now
Telegram Group Join Now
Suddi Sante Desk