ಬೀದರ್ –
ಅಳಿಯನ ಸಾವಿನ ಸುದ್ದಿ ತಿಳಿದು ಮಾವ ಕೂಡಾ ಕೊನೆಯುಸಿರೆಳೆದು ಸಾವಿನಲ್ಲೂ ಒಂದಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ಬಸವ ಕಲ್ಯಾಣ ನಗರದ ಭೀಮನಗರ ನಿವಾಸಿ ದೇವಿಂದ್ರ ಕಂದಗೂಳೆ (55) ಹಾಗೂ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ನಿವಾಸಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಂಕರರಾವ ಖರ್ಗೆ (90) ಸಾವಿನಲ್ಲೂ ಒಂದಾದ ಮಾವ ಅಳಿಯ ರಾಗಿದ್ದಾರೆ.

ಕಳೆದ ವಾರ ಅಳಿಯ ದೇವೀಂದ್ರ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿ ತಿಳಿದ ಮಾವ ಶಂಕರಾವ ಅವರು ಕೂಡ ಆಸ್ಪತ್ರೆ ಸೇರಿದ್ದರು. ಒಂದು ವಾರದ ನಂತರ ಅಂದ್ರೆ ಅಳಿಯ ದೇವೀಂದ್ರ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅಳಿಯನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮಾವ ಶಂಕರರಾವ ಕೂಡ ಕೊನೆಯುಸಿರೆಳೆದಿದ್ದಾರೆ.

ಶಂಕರರಾವ ಖರ್ಗೆ ಅವರು 2000 ರಲ್ಲಿ ಭಾಲ್ಕಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿ, ರಾಜ್ಯಸಭಾ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಸಹೋದರ ಸಂಬಂಧಿಯಾಗಿದ್ದಾರೆ.