ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಮೀಸಲಾತಿ ಘೋಷಣೆ

Suddi Sante Desk

ಹುಬ್ಬಳ್ಳಿ ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್,ಉಪ ಮೇಯರ್ ಮೀಸಲಾತಿ ಜನವರಿ 21, 2021 ರಲ್ಲಿಯೇ ಪ್ರಕಟವಾಗಿ ಸರಕಾರದಿಂದ ಆದೇಶವಾಗಿದೆ

ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆ ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳ 23 ಅವಧಿಗಾಗಿ ಮೀಸಲಾತಿ ನಿಗದಿಗೊಳಿಸಿ, ರಾಜ್ಯ ಸರಕಾರವು ಜನವರಿ 21, 2021 ರಂದು ಆದೇಶ ಹೊರಡಿಸಿದೆ.

ಈ ಕುರಿತು ಫೆಬ್ರವರಿ 11, 2021 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ವಿಶೇಷ ರಾಜ್ಯಪತ್ರಿಕೆ ಪ್ರಕಟಿಸಲಾ ಗಿದೆ.ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ 23 ಅವಧಿಗಾಗಿ ಮೀಸಲಾತಿಯನ್ನು ನಿಗದಿಪಡಿಸಲಾ ಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮೇಯರ ಸ್ಥಾನವನ್ನು ಹಿಂದುಳಿದ ವರ್ಗ ‘ಎ’ ಮತ್ತು ಉಪ ಮೇಯರ್ ಸ್ಥಾನವನ್ನು ‘ಪರಿಶಿಷ್ಟ ಜಾತಿ ಮಹಿಳೆ’ ಗೆ ಮೀಸಲಾತಿ ನಿಗದಿಪಡಿಸಲಾಗಿದೆ.ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಸರಕಾರದ ಆದೇಶದಲ್ಲಿ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.