ಫಲಿತಾಂಶ ಘೋಷಣೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಗಲಾಟೆ – ಐದಾರು ಜನ ಜನರ ಮೇಲೆ ಅಟ್ಯಾಕ್ ಆಸ್ಪತ್ರೆಗೆ ದಾಖಲು…..

Suddi Sante Desk

ಹುಬ್ಬಳ್ಳಿ –

ಚುನಾವಣೆಯ ಮತ ಏಣಿಕೆಯ ನಂತರ ಹುಬ್ಬಳ್ಳಿ ಯಲ್ಲಿ ಗಲಾಟೆಯಾಗಿದೆ.ಹೌದು ಚುನಾವಣೆಯಲ್ಲಿ ಸೋತಿದ್ದಕ್ಕಾಗಿ ಕುಟುಂಬದವೊಂದರ ಮೇಲೆ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ.

ವಿಜಯ್ ಗುಂಟರಾಳ ಕುಟುಂಬದ ಮೇಲೆ ಹಲ್ಲೆ ಯನ್ನು ಮಾಡಲಾಗಿದೆ.ನಗರದ ಕರ್ಕಿ ಬಸವೇಶ್ವರ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಬೆಳದಡಿ ಮತ್ತು ಬೆಂಬಲಿಗರಿಂದ ಹಲ್ಲೆ ಮಾಡಿದ್ದಾರೆಂದು ಗುಂಟರಾಳ ಕುಟುಂಬವರು ಆರೋಪವನ್ನು ಮಾಡಿದ್ದಾರೆ

ಹಲ್ಲೆ ಮಾಡಿದ್ದಾರೆಂದು ಗುಂಟರಾಳ ಕುಟುಂಬ ದವರ ಆರೋಪವನ್ನು ಮಾಡಿದ್ದಾರೆ.ವಾರ್ಡ್ 69 ರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಶ್ರೀನಿವಾಸ ಬೆಳದಡಿ ಸ್ಪರ್ಧೆ ಮಾಡಿದ್ದರು.ಇವರು ಸೋತಿದ್ದು ಪಕ್ಷೇತರ ಅಭ್ಯರ್ಥಿ ಮರಿಯಮ್ಮ ಬಿಜವಾಡ ಗೆಲುವು ಸಾಧಿಸಿದ್ದಾರೆ.

ಸೋತಿದ್ದಕ್ಕಾಗಿ ನಮ್ಮ ಸೋಲಿಗೆ ಇವರೇ ಕಾರಣ ಎಂದು ಹಲ್ಲೆ ಮಾಡಿದ್ದಾರಂತೆ.ಮತ ಏಣಿಕೆಯ ನಂತರ ಗಲಾಟೆ ನಡೆದಿದೆ.ತಲ್ವಾರ್ ಸೇರಿದಂತೆ ಹಲವು ಮಾರಕಾಸ್ತ್ರಗಳಿಂದ ಏಕಾಎಕಿಯಾಗಿ ಅಟ್ಯಾಕ್ ಮಾಡಿದ್ದಾರಂತೆ.ಮನೆಯ ಮುಂದೆ ನಿಲ್ಲಿಸಲಾಗಿದ್ದ ಆಟೋ ಬೈಕ್ ಜಖಂ ಆಗಿವೆ.

ನಾಲ್ಕೈದು ಜನರಿಗೆ ಹಲ್ಲೆಯನ್ನು ಮಾಡಲಾಗಿದೆ.
ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ವಿಜಯ ಗುಂಟರಾಳ ಕುಟುಂಬದವರು.ಸ್ಥಳಕ್ಕೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಈ ಕುರಿತಂತೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಪೊಲೀಸರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.