ಬೆಂಗಳೂರು –
ಸೆಕ್ಸ್ ಸಿಡಿ ವಿಚಾರವು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ಈಗಾಗಲೇ ಆರೋಪ ಹೊತ್ತುಕೊಂಡು ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಲ್ಲದೆ ಇದರಿಂದ ಈಗಾಗಲೇ ಸಾಹುಕಾರ್ ತಲೆದಂಡವಾಗಿದೆ. ರಮೇಶ್ ಜಾರಕಿಹೊಳಿ ವಿರುದ್ಧ ದಿನೇಶ್ ಕಲ್ಲಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ದಾಖಲಾಗಿ ತನಿಖೆ ನಡೆಯುತ್ತಿದೆ.ಇವೆಲ್ಲದರ ನಡುವೆ ಬೆನ್ನಲ್ಲೇ ಇದೀಗ ದೂರುದಾರ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ವಿರುದ್ಧವೇ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿಡಿ ರಿಲೀಸ್ ಹಿಂದೆ ರಾಜಕೀಯ ಷಡ್ಯಂತ್ರವಿದೆ. ರಾಜಕೀಯ ಷಡ್ಯಂತ್ರದಿಂದ ಸಚಿವರ ತೇಜೋವಧೆ ಮಾಡಲಾಗಿದೆ ಎಂದು ದಿನೇಶ್ ಕಲ್ಲಳ್ಳಿ ವಿರುದ್ಧವೇ ಕನ್ನಡ ಪರ ಒಕ್ಕೂಟ ಅಧ್ಯಕ್ಷ ಪುಟ್ಟೇಗೌಡ ದೂರು ನೀಡಿದ್ದಾರೆ.ದಿನೇಶ್ ಕಲ್ಲಳ್ಳಿಗೂ ರಾಸಲೀಲೆ ಪ್ರಕರಣ ಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಯುವತಿಗೆ ಅನ್ಯಾಯವಾಗಿದ್ದರೆ ಆಕೆ ಏಕೆ ದೂರ ನೀಡಿಲ್ಲ? ಇದೊಂದು ಬ್ಲ್ಯಾಕ್ ಮೇಲ್ ರಾಜಕಾರಣ ಎಂದು ದೂರಿನಲ್ಲಿ ಪುಟ್ಟೇಗೌಡರು ಆರೋಪಿಸಿದ್ದಾರೆ
ವಿಡಿಯೋಗಳನ್ನು ವೀಕ್ಷಿಸಿದರೆ ಸಮ್ಮತಿ ಲೈಂಗಿಕ ಕ್ರಿಯೆ ಥರ ಕಾಣುತ್ತಿದೆ. ಆದರೆ ಇದನ್ನು ಬಳಸಿ ಕೊಂಡು ಸಚಿವರ ತೇಜೋವಧೆ ಮಾಡುತ್ತಿರು ವುದು ಸರಿಯಲ್ಲ. ಈ ಬ್ಲ್ಯಾಕ್ ಮೇಲ್ ರಾಜಕಾರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿಯನ್ನ ತನಿಖೆ ನಡೆಸಬೇಕಿದೆ ಎಂದು ಒಕ್ಕೂಟದಿಂದ ಒತ್ತಾಯಿಸಿ ಪ್ರಕರಣ ದಾಖಲು ಮಾಡಲಾಗಿದೆ.