ಬೆಂಗಳೂರು –
ವಿಧಾನ ಪರಿಷತ್ನಲ್ಲಿ ಕೆಲ ಸದ್ಯಸರು ಸದನ ನಡೆಯುವ ವೇಳೆಯಲ್ಲಿ ಮೊಬೈಲ್ ಬಳಕೆಗೆ ಸಂಬಂಧಪಟ್ಟಂತೆ ಕಠಿಣ ಕ್ರಮಕ್ಕೆ ನೂತನ ಸಭಾಪತಿ ಬಸವರಾಜ್ ಹೊರಟ್ಟಿ ಮುಂದಾಗಿದ್ದಾರೆ. ಹೌದು ಇನ್ಮುಂದೆ ಸದನದಲ್ಲಿ ಸದಸ್ಯರು ಮೊಬೈಲ್ ಬಳಕೆ ಮಾಡದಂತೆ ಆದೇಶ ಹೊರಡಿಸಿದ್ದಾರೆ.

ಗುರುವಾರದಿಂದ ಬಜೆಟ್ ಅಧೀವೇಶನ ಶುರುವಾಗಲಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಸದ್ಯಸರು ಮೊಬೈಲ್ ತರದಂತೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಸಭಾನಾಯಕರು, ಸಚೇತಕರು ಹಾಗು ಸದಸ್ಯರ ಜೊತೆಗೆ ಚರ್ಚೆ ನಡೆಸಿ ಸದನ ಘನತೆಗೆ ಕಪ್ಪು ಚುಕ್ಕೆ ಬಾರದ ಹಾಗೇ ನಡೆದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಅಂತ ಹೇಳಿದ್ದಾರೆ.