UPSC ಪರೀಕ್ಷೆ ಯಲ್ಲಿ ಧಾರವಾಡದ ವಿದ್ಯಾರ್ಥಿನಿ 354 ನೇ ರ‍್ಯಾಂಕ್‌ ನವಲಗುಂದ ಮೇಘಾ ಜೈನ್ ಅಮೋಘ ಸಾಧನೆ….

Suddi Sante Desk

ಹುಬ್ಬಳ್ಳಿ –

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯ ನವಲಗುಂದದ ಮೇಘಾ ಜೈನ್‌ 354ನೇ ರ‍್ಯಾಂಕ್‌ ಪಡೆದುಕೊಳ್ಳುವ ಮೂಲಕ ಸಾಧನೆ ಗೈದಿದ್ದಾರೆ.ಹೌದು UPSC ಪರೀಕ್ಷೆ ಪಾಸಾಗು ವುದಕ್ಕಾಗಿ ಸಾಫ್ಟ್‌ವೇರ್ ಕಂಪನಿಯ ಕೆಲಸ ಬಿಟ್ಟು ಬಂದಿದ್ದ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 354ನೇ ರ‍್ಯಾಂಕ್‌ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಪಾಲಕರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದು ಹೇಳಿದರು.ನವಲಗುಂದ ರೋಟರಿ ಶಾಲೆಯಲ್ಲಿ ಪ್ರಾಥಮಿಕ,ಲಯನ್ಸ್‌ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹುಬ್ಬಳ್ಳಿಯ ಪಿ.ಸಿ. ಜಾಬಿನ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ

ಮೇಘನಾ ಅವರ ತಂದೆ ಮನೋಜ ಪಾರಸಮಲ್‌ ಜೈನ್‌ ಅವರು ನವಲಗುಂದದಲ್ಲಿ ಮೆಡಿಕಲ್‌ ಶಾಪ್‌ ನಡೆಸುತಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.