ಮತ್ತೊಂದು ಸಾಹಸಕ್ಕೆ ಮುಂದಾದ್ರು ಮುರಗೇಶ ಚನ್ನಣ್ಣವರ ಮತ್ತು ಸದಾನಂದ ಅಮರಾಪೂರ – ಪೊಲೀಸ್ ಕರ್ತವ್ಯದೊಂದಿಗೆ ಸಾಮಾಜಿಕ ಜವಾಬ್ದಾರಿ ತಿಳಿಸಿಕೊಡಲು ಮುಂದಾದ್ರು…..

Suddi Sante Desk

ಧಾರವಾಡ –

ವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿರುವ ಯುವ ಉತ್ಸಾಹಿ ಇಲಾಖೆಯಲ್ಲಿ ಈಗಾಗಲೇ ತಮ್ಮದೇಯಾದ ವಿಶೇಷ ಸೈಕ್ಲೀಂಗ್,ಓಟ ಈಜು ಸೇರಿದಂತೆ ಹಲವಾರು ವಿಭಾಗಗಲ್ಲಿ ಐರನ್ ಮ್ಯಾನ್ ಆಗಿ ವಯಕ್ತಿಕವಾಗಿ ಸಾಕಷ್ಟು ಪ್ರಮಾಣದಲ್ಲಿ ಸಾಧನೆ ಮಾಡಿ ಇಲಾಖೆಯ ಹೆಸರನ್ನು ಕೀರ್ತಿ ಪತಾಕೆಯನ್ನು ಹೆಚ್ಚಿಸಿರುವ ಮುರುಗೇಶ ಚನ್ನಣ್ಣವರ ವೃತ್ತಿಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿಕೊಡಲು ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ.

ಹೌದು ಬಿಡುವಿಲ್ಲದ ಒತ್ತಡದ ಕೆಲಸ ಕಾರ್ಯಗಳ ನಡುವೆ ಸದಾ ಉತ್ಸಾಹಿಯಾಗಿರುವ ಇವರು ಈಗಾಗಲೇ ಹೇಳಿದಂತೆ ದೇಶದ ಮೂಲೆ ಮೂಲೆಗಳಲ್ಲಿ ತಮ್ಮದೇ ಯಾದ ಕ್ರೀಡಾ ಪ್ರತಿಭೆಯ ಮೂಲಕ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಇವರು ಇದರ ನಡುವೆ ದೇಶದಲ್ಲಿ ಇತ್ತೀಚಿಗೆ ಪೇಂಡಭೂತವಾಗಿ ಕಾಡುತ್ತಿರುವ ಹಾಗೇ ಹೆಚ್ಚಾಗುತ್ತಿರುವ ಡ್ರಗ್ಸ್ ಕುರಿತಂತೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಅದು ಸೈಕಲ್ ಮೇಲೆ ಕಾಶ್ಮೀರ ದಿಂದ ಕನ್ಯಾಕುಮಾರಿ ಯವರೆಗೆ ಸೈಕಲ್ ಮೂಲಕ.ಸಧ್ಯ ಹುಬ್ಬಳ್ಳಿಯ ಹೆಸ್ಕಾಂ ನಲ್ಲಿ ಇನ್ಸ್ಪೇಕ್ಟರ್ ಆಗಿರುವ ಮುರುಗೇಶ ಚನ್ನಣ್ಣನವರ ಇವರೊಂದಿಗೆ ನಿವೃತ್ತ ಪೊಲೀಸ್ ಅಧಿಕಾರಿ ಸದಾನಂದ ಅಮಲಾಪುರ ಅವರ ಪುತ್ರ ಇವರೊಂದಿಗೆ ಸೈಕಲ್ ತುಳಿಯಲಿದ್ದಾರೆ.

ಅಕ್ಟೋಬರ್ 27 ರಿಂದ ಕಾಶ್ಮೀರದಿಂದ ವೈಷ್ಟೋದೇವಿಯ ದರ್ಶನವನ್ನು ಪಡೆದುಕೊಂಡು ಇವರು ಸೈಕಲ್ ಯಾತ್ರೆ ಯನ್ನು ಕನ್ಯಾ ಕುಮಾರಿಯವರೆಗೆ ಆರಂಭ ಮಾಡಲಿದ್ದಾರೆ. ಅಂದು ಆರಂಭಗೊಂಡ ಡ್ರಗ್ಸ್ ಕುರಿತಾದ ಸೈಕಲ್ ಯಾತ್ರೆ ಕನ್ಯಾಕುಮಾರಿಯವರೆಗೆ ಸಾಗಲಿದೆ. ಒಟ್ಟು 3700 ಕಿಲೋ ಮೀಟರ ನ ಈ ಒಂದು ಯಾತ್ರೆ ಒಟ್ಟು 20 ದಿನಗಳ ಕಾಲ ಸಾಗಲಿದ್ದು ಈ ಒಂದು ಯಾತ್ರೆಯ ಉದ್ದಕ್ಕೂ ದೇಶದಲ್ಲಿ ಇತ್ತೀಚಿಗೆ ಹೆಚ್ಚಾಗಿ ಅದರಲ್ಲೂ ಯುವಕರು ಅಂಟಿಕೊಳ್ಳು ತ್ತಿರುವ ಡ್ರಗ್ಸ್ ಕುರಿತಂತೆ ತಿಳುವಳಿಕೆಯನ್ನು ಮೂಡಿಸಿ ಜಾಗೃತಿ ಮೂಡಿಸಲಿದ್ದಾರೆ.

ಸಮಾಜದಲ್ಲಿ ಪೊಲೀಸ್ ವೃತ್ತಿ ಅಷ್ಟೇ ನಮ್ಮ ಕೆಲಸ ಅಲ್ಲದೇ ಅದರೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಏನು ಎಂಬುದನ್ನು ಇವರು ಈ ಒಂದು ಯಾತ್ರೆಯ ಮೂಲಕ ತೋರಿಸಿಕೊಡಲಿದ್ದಾರೆ.ಇನ್ನೂ ಇಂದು ಧಾರವಾಡದಿಂದ ಕಾರಿನಲ್ಲಿ ಜಮ್ಮು ಕಾಶ್ಮೀರಕ್ಕೆ ಸೈಕಲ್ ಸೇರಿದಂತೆ ಇತರೆ ವಸ್ತುಗಳನ್ನು ಕಳಿಸಿಕೊಡಲಾಯಿತು.

ನಗರದ ಕೆಸಿಡಿ ಗಣಪತಿ ದೇವಸ್ಥಾನದ ಮುಂದೆ ಕಾರಿಗೆ ಪೂಜೆ ಸಲ್ಲಿಸಿ ಕಳಿಸಿಕೊಡಲಾಯಿತು.ಈ ಒಂದು ಸಮಯ ದಲ್ಲಿ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಅವರ ತಾಯಿ ಗೌರಮ್ಮ,ಪತ್ನಿ ಶ್ವೇತಾ ಆಪ್ತರು ಇನ್ನೂ ಸದಾನಂದ ಅಮರಾ ಪೂರ ಕುಟುಂಬದವರು,ಇವರೊಂದಿಗೆ ಇನ್ಸ್ಪೆಕ್ಟರ್ ಅಧಿಕಾರಿಗಳಾದ ಶ್ರೀಧರ ಸತಾರೆ,ಮಹಾಂತೇಶ ಬಸಾಪೂರ ಸಂಗಮೇಶ ದಿಡ್ಡಿಗನಾಳ,ಪೊಲೀಸ್ ಸಿಬ್ಬಂದಿಗಳಾದ ನಾಯ್ಕರ್,ಸೇರಿದಂತೆ ಹಲವರು ಉಪಸ್ಥಿತರಿದ್ದು ಆತ್ಮೀಯ ವಾಗಿ ಶುಭಹಾರೈಸಿ ಬೀಳ್ಕೊಟ್ಟರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.