ಬೆಂಗಳೂರು –
ನಾಡ ದೊರೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಯಡಿಯೂರಪ್ಪ ರಾಜಕೀಯ ಜೀವನದ 8ನೇ ಬಜೆಟ್ ಆಗಿದೆ. ಇವತ್ತು ಮಧ್ಯಾಹ್ನ 12 ಗಂಟೆಗೆ ಬಜೆಟ್ ಮಂಡಿಸಲಿರೋ ಸಿಎಂ, ಅದಕ್ಕೂ ಮುನ್ನ ಸಂಪುಟ ಸಭೆಯಲ್ಲಿ ಬಜೆಟ್ ಗೆ ಅನುಮೋದನೆ ಪಡೆಯಲಿದ್ದಾರೆ.

ಇವತ್ತಿನ ರಾಜ್ಯ ಬಜೆಡ್ ಕೋವಿಡ್ ಸಮಯದ ಮೊದಲ ಬಜೆಟ್ ಇದ್ದಾಗಿದೆ.ಆರ್ಥಿಕ ಸಮತೋಲನ ಕಾಯ್ದುಕೊಂಡು ಬಜೆಟ್ ಮಂಡಿಸಬೇಕಾದ ಸವಾಲು ಸಿಎಂ ಹೆಗಲೇರಿದೆ. ಎಲ್ಲ ವರ್ಗಗಳಿಗೂ ಸಲ್ಲುವ ಬಜೆಟ್ ಮಂಡಿಸೋ ಸಾಧ್ಯತೆಯಿದೆ. ಈ ಸಲ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸದಿರಲು ಸಿಎಂ ನಿರ್ಧರಿಸಿದ್ದಾರೆ.

ಈ ಬಾರಿಯ ಬಜೆಟ್ ಗಾತ್ರ ಕಳೆದ ಬಾರಿಗಿಂತಲೂ ಹೆಚ್ಚಾಗಿಲಿದೆ ಅಂತ ಹೇಳಲಾಗ್ತಿದೆ. ಹಣಕಾಸು ಸ್ಥಿತಿಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಯಂತೆ. ಮಹಿಳೆಯರ ಅಭಿವೃದ್ಧಿ, ಪ್ರವಾಸೋ ದ್ಯಮ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತೆ. ಕೃಷಿ, ನೀರಾವರಿ ಕ್ಷೇತ್ರಗಳಿಗೂ ಆದ್ಯತೆ ಇರಲಿದೆ ಎನ್ನಲಾಗಿದೆ.

ಜೊತೆಗೆ ಏಳೆಂಟು ತಿಂಗಳಲ್ಲಿ ಬೆಂಗಳೂರು ಚಿತ್ರಣ ಬದಲಿಸಲು ರೂಪುರೇಷೆ ಸಿದ್ಧವಾಗಿದ್ದು ಇದರ ಘೋಷಣೆಯಾಗುವ ಸಾಧ್ಯತೆ ಇದೆ. ಇನ್ನು, ಜನರಿಗೆ ಹೊಸ ತೆರಿಗೆಯ ಹೊರೆ ಈ ಒಂದು ಬಜೆಟ್ ನಲ್ಲಿ ಇರಲ್ಲ ಎನ್ನಲಾಗಿದೆ.