ಬೆಂಗಳೂರು –
ಮುಖ್ಯಮಂತ್ರಿ ಯಡಿಯೂರಪ್ಪ 8 ನೇ ಬಾರಿಗೆ ಬಜೆಟ್ ಮಂಡನೆ ಮಾಡಿದರು.ವಿಧಾನ ಸಭೆಯಲ್ಲಿ ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ 2021-22 ನೆಯ ಸಾಲಿನ ಆಯ ವ್ಯಯವನ್ನು 12 ಗಂಟೆಗೆ ಮಂಡಿಸಲು ಆರಂಭ ಮಾಡಿದರು.ಅತ್ತ ಬಜೆಟ್ ಮಂಡನೆ ಆರಂಭ ಮಾಡುತ್ತಿದ್ದಂತೆ ಇತ್ತ ಇದನ್ನು ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಧರಣಿ ನಡೆಸಿದ್ದಲ್ಲದೇ, ಬಜೆಟ್ ಅಧಿವೇಶನದಿಂದ ಸಭಾತ್ಯಾಗ ಮಾಡಿದರು.
12 ಗಂಟೆಗೆ BSY ಅವರು ಬಜೆಟ್ ಪೆಟ್ಟಿಗೆಯೊಂದಿಗೆ ಸದನಕ್ಕೆ ಆಗಮಿಸಿದರು. ಈ ವೇಳೆ ಕಪ್ಪು ಪಟ್ಟಿ ಧರಿಸಿ ಸದನಕ್ಕೆ ಬಂದ ಕಾಂಗ್ರೆಸ್ ಧರಣಿ ನಡೆಸಿದ್ದಲ್ಲದೇ, ಧಿಕ್ಕಾರ ಕೂಗಿ ಸದಸ್ಯರು ಸದನದಿಂದ ಹೊರನಡೆದರು.ಇತ್ತ ನಾಡ ದೊರೆ ಬಜೆಟ್ ಅನ್ನು ಮಂಡನೆ ಮಾಡಿದರು.
ಈ ಸರಕಾರಕ್ಕೆ ಬಜೆಟ್ ಮಂಡಿಸುವ ಯಾವುದೇ ನೈತಿಕತೆ ಇಲ್ಲ. ಹೀಗಾಗಿ ನಾವು ಸದನದಿಂದ ಹೊರ ನಡೆಯುತ್ತಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬಳಿಕ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಇದೇ ಸಂದರ್ಭ ಬಿಜೆಪಿ ಸದಸ್ಯರು ‘ಜೈ ಶ್ರೀರಾಮ್’ ಘೋಷಣೆ ಕೂಗಿದರು.