ಮಂಡ್ಯ –
ರೈತರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮಲೆಕ್ಕಿಗನೊಬ್ಬ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಮಂಡ್ಯದ ಮದ್ದೂರು ಪಟ್ಟಣದ ತಾಲೂಕು ಕಚೇರಿ ಯಲ್ಲಿ ನಡೆದಿದೆ.ಹನುಮಂತಪುರದ ಗ್ರಾಮ ಲೆಕ್ಕಿಗ ಚುಂಚಸ್ವಾಮಿ ಹುಲಿಗೆರೆಪುರ ಗ್ರಾಮದಲ್ಲಿ ಹೆಚ್ಚುವರಿ ಗ್ರಾಮ ಲೆಕ್ಕಿಗರಾಗಿ ಕರ್ತವ್ಯ ನಿರ್ವಹಿ ಸುತ್ತಿದ್ದ ವೇಳೆ ಪೌತಿ ಖಾತೆ ಮಾಡಿಕೊಡುವಂತೆ ಹುಲಿಗೆರೆ ಪುರ ಗ್ರಾಮದ ರೈತ ಕುಮಾರ್ ಎಂಬು ವರು ಕಳೆದ ಮಾರ್ಚ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು.

ಕಳೆದ ಹಲವು ದಿನಗಳಿಂದಲೂ ಅಲೆದಾಡಿಸುತ್ತಿದ್ದ ಜೊತೆಗೆ ಹಣದ ಬೇಡಿಕೆ ಇಟ್ಟಿದ್ದರು ಈ ಒಂದು ಹಿನ್ನೆಲೆಯಲ್ಲಿ ಬೇಸತ್ತ ಕುಮಾರ್, ಗ್ರಾಮ ಲೆಕ್ಕಿಗ ಚುಂಚಸ್ವಾಮಿ ವಿರುದ್ಧ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮಲೆಕ್ಕಿಗ ಚುಂಚಸ್ವಾಮಿ ಅವರು ರೈತ ಕುಮಾರ್‌ನಿಂದ 3 ಸಾವಿರ ರೂ .ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಚುಂಚಸ್ವಾಮಿ ಅವರನ್ನು ವಶಕ್ಕೆ ಪಡೆದಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ