ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಯಲ್ಲಿ ಪೂಜೆ – CM ಗೆ ಸಾಥ್ ನೀಡಿದ ಸ್ಥಳೀಯ ಶಾಸಕರು ಸಚಿವರು,ಆಪ್ತರು…..

Suddi Sante Desk

ಹುಬ್ಬಳ್ಳಿ –

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹುಬ್ಬಳ್ಳಿಯ ಕಚೇರಿಯಲ್ಲಿ ದೀಪಾವಳಿ ಪೂಜಾ ಸಮಾರಂಭ ನಡೆಯಿತು ಹೌದು ನಗರದಲ್ಲಿರುವ ಕಚೇರಿಯಲ್ಲಿ ಸಡಗರ ಸಂಭ್ರಮ ದಿಂದ ದೀಪಾವಳಿ ಪೂಜೆ ಯನ್ನು ಮಾಡಲಾಯಿತು

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ಮಾಜಿ ಮುಖ್ಯಮಂತ್ರಿ,ಜಗದೀಶ್ ಶೆಟ್ಟರ್,ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ,ಶಾಸಕರಾದ ಅಮೃತ್ ದೇಸಾಯಿ ಸೇರಿದಂತೆ ಹಲವರು ಈ ಒಂದು ಪೂಜಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಸಾಥ್ ನೀಡಿದರು

ಕಚೇರಿಯಲ್ಲಿ ಸಾಮೂಹಿಕವಾಗಿ ಪೂಜೆಯನ್ನು ಮಾಡಲಾ ಯಿತು.ಸ್ವತಃ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಈ ಒಂದು ಪೂಜಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮೆರಗು ನೀಡಿದರು

ಇದರೊಂದಿಗೆ ಜಿಲ್ಲಾಧಿಕಾರಿ ನಿತೇಶ್ ಕುಮಾರ್ ಪಾಟೀಲ್, ಪೊಲೀಸ್ ಆಯುಕ್ತ ಲಾಭೂರಾಮ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಆಪ್ತರು ಮುಖಂಡರು ಈ ಒಂದು ಸಮಯದಲ್ಲಿ ಪಾಲ್ಗೊಂಡು ಉಪಸ್ಥಿತರಿದ್ದರು

ಇದರೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ನಮ್ಮ ಲೋಕಸಭಾ ಕ್ಷೇತ್ರದ ಕಛೇರಿಯಲ್ಲಿ ಮಹಾಲಕ್ಷ್ಮೀ ಪೂಜಾ ಸಮಾರಂಭ ಅದ್ದೂರಿಯಾಗಿ ನಡೆಯಿತು ಹಲವು ಗಣ್ಯರು ಪಾಲ್ಗೊಂಡು ಶುಭ ಕೋರಿದರು.

ವರದಿ – ವೆಂಕಟೇಶ್, ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.