ಗದ್ದಗ,ಗೊಂದಲ,ಗಲಾಟೆಯ ನಡುವೆ ವರ್ಗಾವಣೆ ಆದೇಶ ಪಡೆದರು 73 ಜನ ಶಿಕ್ಷಕರು – ಧಾರವಾಡದಲ್ಲಿನ ಇವತ್ತಿನ ವರ್ಗಾವಣೆಯ ಕಂಪ್ಲೀಟ್ ಮಾಹಿತಿ…..

Suddi Sante Desk

ಧಾರವಾಡ –

ಕೊನೆಗೂ ಶಿಕ್ಷಕರ ವರ್ಗಾವಣೆ ಆರಂಭವಾಗಿದ್ದು ಕಡ್ಡಾಯ ಮತ್ತು ಹೆಚ್ಚುವರಿ ವಿಭಾಗದಲ್ಲಿ ಧಾರವಾಡದಲ್ಲಿ ಬೆಳಿಗ್ಗೆ ಆರಂಭದಲ್ಲಿ ಗೊಂದಲ ಗಲಾಟೆ ವರ್ಗಾವಣೆಗೆ ಬಂದವರು ಮೂರ್ಛೆ ಹೋಗಿ ಬಿದ್ದಿರುವ ಚಿತ್ರಣ ಇದರೊಂದಿಗೆ ಒಟ್ಟು 120 ಹುದ್ದೆಗಳಲ್ಲಿ ಕೇವಲ 73 ಹುದ್ದೆ ಖಾಲಿ ಇದ್ದು ಹೀಗಾಗಿ ಶಿಕ್ಷಕರ ಧರಣಿ ಹೋರಾಟ ಇದೇಲ್ಲದರ ನಡುವೆ ಕೊನೆಗೂ ವರ್ಗಾವಣೆ ಆರಂಭಗೊಂಡು 73 ಶಿಕ್ಷಕರು ವರ್ಗಾವಣೆಯ ಆದೇಶವನ್ನು ತಗೆದುಕೊಂಡರು

ಹೌದು ಇಂದು ನಡೆದ ಮೊದಲ ದಿನದಲ್ಲಿ ಒಟ್ಟು 120 ಹುದ್ದೆಗಳಲ್ಲಿ 73 ಶಿಕ್ಷಕರು ಮಾತ್ರ ಕೌನ್ಸಲಿಂಗ್ ನಲ್ಲಿ ವರ್ಗಾವಣೆಯ ಆದೇಶವನ್ನು ತಗೆದುಕೊಂಡರು

ಒಟ್ಟು 73 ಜನ ಶಿಕ್ಷಕರಿಗೆ ಮಾತ್ರ ಈ ಒಂದು ವರ್ಗಾವಣೆ ಯಲ್ಲಿ ಅವಕಾಶ ಸಿಕ್ಕಿತು.ಒಟ್ಟು 119 ಶಿಕ್ಷಕರು ಹಾಜರಾದರೆ ಅದರಲ್ಲಿ ಕೇವಲ 73 ಶಿಕ್ಷಕರಿಗೆ ಆದೇಶ ನೀಡಲಾಯಿತು ಇನ್ನೂ ಒರ್ವ ಶಿಕ್ಷಕ ಗೈರಾದರು ಇನ್ನೂ 38 ಶಿಕ್ಷಕರಿಗೆ ಹುದ್ದೆ ಖಾಲಿ ಇಲ್ಲದ ಹಿನ್ನೆಲೆಯಲ್ಲಿ ಅವಕಾಶ ಸಿಗಲಿಲ್ಲ

ಒಟ್ಟಾರೆ ಅಂತೂ ಇಂತೂ ಶಿಕ್ಷಕರ ವರ್ಗಾವಣೆ ಆರಂಭ ವಾಗಿದ್ದು ಈಗಾಗಲೇ ಮೊದಲ ದಿನದಲ್ಲಿ ಎಲ್ಲಾ ಗೊಂದಲ ನಡುವೆ ಶಿಕ್ಷಕರು ವರ್ಗಾವಣೆ ಕೌನ್ಸಲಿಂಗ್ ಗೆ ಹಾಜರಾ ಗಿದ್ದು ಮುಂದೆನಾಗುತ್ತದೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.