ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋವಿಂದಪ್ಪ ಭಜಂತ್ರಿ ಬಗ್ಗೆ ನಿಮಗೇಷ್ಟು ಗೊತ್ತು – ಅವರ ಕುರಿತು ಒಂದು ಅವಲೋಕನ…

Suddi Sante Desk

ಹುಬ್ಬಳ್ಳಿ –

ವೆಂಕಪ್ಪ ಗೋವಿಂದಪ್ಪ ಭಜಂತ್ರಿ ಹುಬ್ಬಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮವಾದ ಶರೇವಾಡ ಗ್ರಾಮದ ಹಿರಿಯ ಮಹಾನ್ ಜಾನಪದ ಕಲಾವಿದ.ಇವರು ಹೆಸರು ಹೇಳಿದರೆ ಸಾಕು ಇವರ ಸಾಧನೆಯನ್ನು ಜಿಲ್ಲೆಯ ಜನತೆ ಹೇಳತಾರೆ ಅಷ್ಟೊಂದು ಹೆಸರು ಮಾಡಿರುವ ವೆಂಕಪ್ಪ ಗೋವಿಂದಪ್ಪ ಭಜಂತ್ರಿ ಅವರು ಎಲೆ ಮರೆಯಾಗಿ ಸೇವೆಯನ್ನು ಮಾಡತಾ ಇದ್ದಾರೆ ಜಿಲ್ಲೆಯ ಹಿರಿಯ ಜಾನಪದ ಕಲಾವಿದ ರಾಗಿರುವ ಇವರಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅರೆಸಿ ಬಂದಿದೆ.

75 ವರ್ಷದ ವೆಂಕಪ್ಪ ಅವರು ಕಳೆದ 55 ವರ್ಷಗಳಿಂದ ಶಹನಾಯಿ ಹಾಗೂ ಕರಡಿ ಮೇಳದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಸರ್ಕಾರ ಅವರಿಗೆ ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.ವೆಂಕಪ್ಪ ಅವರು ಶಹನಾಯಿ ಮತ್ತು ಕರಡಿ ಮೇಳಗಳನ್ನು ಕಟ್ಟಿಕೊಂಡು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನೂರಾರು ಕಾರ್ಯಕ್ರ ಮಗಳನ್ನು ನೀಡಿದ್ದಾರೆ.ಸರ್ಕಾರದ ಪ್ರಾಯೋಜಕತ್ವದ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡು ಕಲೆ ಪ್ರದರ್ಶಿ ಸಿದ್ದಾರೆ.ಇನ್ನೂ ನಾಡಿನ ಐತಿಹಾಸಿಕ ಮೈಸೂರು ದಸರಾ ಉತ್ಸವ ಸೇರಿದಂತೆ ಹಲವಾರು ಉತ್ಸವದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಇಷ್ಟೇ ಅಲ್ಲದೇ ಪೌರಾಣಿಕ ನಾಟಕ,ಸಣ್ಣಾಟ-ದೊಡ್ಡಾಟ, ಕೋಲಾಟ,ಹೆಜ್ಜೆ ಮೇಳ ಮತ್ತು ಭಜನಾ ಮೇಳದಲ್ಲಿ ಶಹನಾಯಿ ನುಡಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ.ಜೊತೆಗೆ ಗುರು ಶಿಷ್ಯ ಪರಂಪರೆಯಲ್ಲಿ ಶಹನಾಯಿ ತರಬೇತಿಯನ್ನು ಮೂರು ತಿಂಗಳು ನೀಡಿದ್ದಾರೆ.ಆಕಾಶವಾಣಿ ಸೇರಿದಂತೆ ಹಲವೆಡೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಗ್ರಾಮೀಣ ಪ್ರದೇಶದಲ್ಲಿರುವ ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಈಗಾಗಲೇ ದೊರಕಿದ್ದು ಇದರೊಂದಿಗೆ ಬೆಂಗಳೂರಿನ ಕರ್ನಾಟಕ ನೃತ್ಯ ಅಕಾಡೆಮಿ ಗೌರವದ ನಮ್ಮ ಸಾಧಕರು ಪ್ರಶಸ್ತಿ ಬಂದಿದೆ.

ಇಷ್ಟೇ ಅಲ್ಲದೇ ಇವರ ಅರ್ಧ ಶತಮಾನದ ಆಧುನಿಕ ದಿನಗಳಲ್ಲಿನ ಜಾನಪದ ಕಲೆಗೆ ಸರಿಯಾಗಿ ಗೌರವ ಸಿಗುತ್ತಿಲ್ಲ ಎನ್ನುವ ಬೇಸವಿತ್ತು ಇದೀಗ ಸರ್ಕಾರ ಶಹನಾಯಿ ಕಲೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ ಇದು ಜಾನಪದ ಕ್ಷೇತ್ರಕ್ಕೆ ಸಂದ ಗೌರವವಾಗಿದೆ ಇದಕ್ಕೆ ಇವರು ಕೂಡಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ

ಇನ್ನೂ ಪ್ರಮುಖವಾಗಿ ಜಾನಪದ ಕಲೆಯಲ್ಲಿ ಅಧ್ಯಾತ್ಮವಿದೆ, ಬದುಕಿನ ಮೌಲ್ಯವಿದೆ ಕಲೆಯ ಉಳಿವಿಗೆ ಇಂದಿನ ಯುವ ಸಮುದಾಯ ಮುಂದಾಗಬೇಕಿದೆ ಎಂಬ ವಾದ ಇವರದು ಒಟ್ಟಾರೆ ಗ್ರಾಮೀಣ ಪ್ರದೇಶದ ಹಿರಿಯ ಜಾನಪದ ಕಲಾವಿದ ರೊಬ್ಬರಿಗೆ ಪ್ರಶಸ್ತಿ ಅರೆಸಿ ಬಂದಿದ್ದು ನಿಜವಾಗಿಯೂ ಮೆಚ್ಚುವಂತ ಕಾರ್ಯ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.