ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಸಾಧನೆಯ ಹಾದಿಯಲ್ಲಿ ಕಿರಣ ಗಾಣಗೇರ – ಮೊದಲ ಸ್ಪರ್ಧೆ ಯಲ್ಲಿಯೇ ಪ್ರಶಸ್ತಿ – ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದ ಅಭಿನಂದನೆಗಳ ಮಹಾಪೂರ…..

Suddi Sante Desk

ಕೋಲ್ಹಾಪೂರ –

ಸಾಧನೆಯ ಛಲವೊಂದಿದ್ದರೆ ಏನಾದರೂ ಸಾಧಿಸಬಹುದು ಮಾಡಬಹುದು ಎಂಬೊದಕ್ಕೆ ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿದ್ದು ಸಧ್ಯ ಸಿಸಿಬಿ ಯಲ್ಲಿರುವ ಪೊಲೀಸ್ ಸಿಬ್ಬಂದಿ ಕಿರಣ ಗಾಣಿಗೇರ ಸಾಕ್ಷಿ.ವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿರುವ ಇವರು ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣನವರ ಸಾಧನೆಯನ್ನು ಮುಂದಿಟ್ಟು ಕೊಂಡು ಸಾಧನೆ ಮಾಡಲು ಮುಂದಾದ್ರು

ಓಟ,ಸೈಕ್ಲಿಂಗ್ ಆರಂಭ ಮಾಡಿದ ಕಿರಣ ಗಾಣಿಗೇರ ಈಗ ತಾವು ಸ್ಪರ್ಧೆ ಮಾಡಿದ ಮೊದಲ ಪ್ರಯತ್ನದಲ್ಲಿಯೇ ನಂಬಲಾರದಂತಹ ಸಾಧನೆಯನ್ನು ಮಾಡಿ ತಮ್ಮ ಸಾಧನೆಗೆ ತಾವೇ ಕೈಗನ್ನಡಿಯಾಗಿದ್ದಾರೆ.

ಒಂದು ಕಡೆ ಬಿಡುವಿಲ್ಲದ ಕರ್ತವ್ಯ ಮತ್ತೊಂದು ಕಡೆಗೆ ಇದರ ನಡುವೆಯೂ ಕೂಡಾ ಸಾಧನೆ ಮಾಡಬೇಕು ನಾನು ಹಾಗೇ ಹೀಗೆ ಆಗಬೇಕು ಎಂದುಕೊಂಡು ಮಾನದಂಡ ವನ್ನು ಮುಂದಿಟ್ಟುಕೊಂಡು ಹಾಗೇ ಪ್ರಮುಖವಾಗಿ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಹಕಾರದಿಂದ ಕಳೆದ ಕೆಲ ದಿನಗಳಿಂ ದ ಆರಂಭಗೊಂಡ ಇವರ ಸಾಧನೆಯ ಯಾತ್ರೆ ಇಂದು ದೂರದ ಕೋಲ್ಹಾಪೂರದಲ್ಲಿ ಪ್ರಶಸ್ತಿಯೊಂದಿಗೆ ನಮ್ಮ ಮುಂದೆ ಪ್ರತಿಬಿಂಬವಾಗಿ ಕಾಣುತ್ತಿದೆ.

ಹೌದು ಕೋಲ್ಹಾಪೂರದಲ್ಲಿ ತ್ರಿಥಲಾನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.ಘಟಾನು ಘಟಿಯ ನಡುವೆ ಆತಂಕ ಭಯದ ಮಧ್ಯೆ ಈ ಒಂದು ಸ್ಪರ್ಧೆಯಲ್ಲಿ ಪಾಲ್ಗೊಂಡ ಇವರು ಮೂರು ವಿಭಾಗಗಳಲ್ಲಿ ನಿಗದಿ ಮಾಡಿದ ಸಮಯ ಕ್ಕಿಂತ ಮೊದಲೇ ಪೂರ್ಣ ಮಾಡಿ ಪ್ರಶಸ್ತಿಯನ್ನು ಮುಡಿಗೆ ಹಾಕಿಕೊಂಡಿದ್ದಾರೆ.ಈಜು,ಸೈಕ್ಲಿಗ್,ಹಾಗೂ ಓಟ ಹೀಗೆ ಮೂರು ವಿಭಾಗಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪೊರೈಸಿ ಅರ್ಹತಾ 2021 ಪ್ರಶಸ್ತಿಯನ್ನು ಗೆದ್ದಿದ್ದಾರೆ.

1.5 ಕಿಲೋ ಮೀಟರ್ ಈಜು,40 ಕಿಲೋ ಮೀಟರ ಸೈಕ್ಲಿಂಗ್,10 ಕಿಲೋ ಮೀಟರ ಓಟವನ್ನು ನಾಲ್ಕು ಗಂಟೆ 30 ನಿಮಿಷ ಪೊರೈಸಲು ಅವಕಾಶವನ್ನು ನೀಡಲಾಗಿತ್ತು ಆದರೆ ಇವರು ಕೇವಲ 3 ಗಂಟೆ 30 ನಿಮಿಷಗಳಲ್ಲಿ ಮುಕ್ತಾಯವನ್ನು ಮಾಡಿ ಸಾಧನೆಯನ್ನು ಮಾಡಿದ್ದಾರೆ ಮುಂದೆ ಗುರಿಯನ್ನಿಟ್ಟುಕೊಂಡು ಹೊರಟ ಇವರಿಗೆ ಆರಂಭ ಮಾಡಿದ ಕೆಲವೇ ದಿನಗಳಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಎಲ್ಲರೂ ಮೆಚ್ಚುವಂತಹ ಸಾಧನೆಯನ್ನು ಮಾಡಿ ಪ್ರಶಸ್ತಿಯೊಂದಿಗೆ ಮೆಚ್ಚುವಂತಹ ಕ್ರೀಡಾ ಸಾಧನೆಯನ್ನು ಮಾಡಿ ಛಲವೊಂದು ಇದ್ದರೆ ಏನಾದರೂ ಮಾಡಬಹುದು ಎಂಬೊದಕ್ಕೆ ಸಾಕ್ಷಿಯಾಗಿ ನಮ್ಮ ಮುಂದೆ ಕಿರಣ ಗಾಣಿಗೇರ ಇದ್ದಾರೆ.

ಇನ್ನೂ ಇವರ ಸಾಧನೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಅದರಲ್ಲೂ ಆಪ್ತ ಬಂಧು ಬಳ ಗೆಳೆಯರು ಸಂಚಾರಿ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಮಲಗೌಡ ನಾಯ್ಕರ್,ಎಎಸ್ ಐ ಅಧಿಕಾರಿ ಗಳಾದ ಬಸವರಾಜ ಕುರಿ,ಎಮ್ ಎ ನಮಾಜೆ,ಎಸ್ ಬಿ ಶಿಂಧೆ,ಸೀತಾ ಕಟಗಿ.ಎಸ್ ಹೆಚ್ ಕಡಕೋಳ, ಸಿಬ್ಬಂದಿ ಗಳಾದ ಹೆಚ್ ಎಮ್ ರೋಳ್ಳಿ,ಬಸಯ್ಯ,ಅಬ್ದುಲ್ ಹಬೀಬ ಜಿ ಜಿ ಚಿಕ್ಕಮಠ,ರವಿ ನಿಂಗೋಜಿ,ಎಸ್ ಬಿ ಗೌಡರ,ಅಲಿ ಹಾಡ್ಕರ್,ಭೀಮನಗೌಡರು,ಬಾಬು ಸೌದತ್ತಿ,ಮಹಾಂತೇಶ ಸೇತಸನದಿ, ಮಂಜು ಗದ್ದಿಕೇರಿ,ಹೊಸಮನಿ,ಸೇರಿದಂತೆ ಸಂಚಾರಿ ಠಾಣೆಯ ಸಿಬ್ಬಂದಿಗಳ ಅಧಿಕಾರಿಗಳು ಅಭಿನಂ ದಿಸಿ ಶುಭಹಾರೈಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.