ಬೆಂಗಳೂರು –
ರಾಜ್ಯದಲ್ಲಿ ಬಿಜೆಪಿ ರಾಜ್ಯ ಸರ್ಕಾರದ್ದು ಒಂದು ಲಂಚ ಮತ್ತೊಂದು ಮಂಚ ಅಂತೆ. ಹೀಗಂತ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.ಇದರೊಂದಿಗೆ ಇತ್ತೀಚಿನ ದಿನಗಳ ಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಟ್ವೀಟ್ ಸಮರ ತಾರಕಕ್ಕೇರಿದೆ. ಸಾಮಾಜಿಕ ತಾಣಗಳಲ್ಲಿ ಕೆಸರೆರ ಚಾಟ ತುಂಬಾ ಜೋರಾಗಿಯೇ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ಪ್ರಕರಣ ದಿನಕ್ಕೊಂದರಂತೆ ಹೊಸ ತಿರುವು ಪಡೆಯುತ್ತಿದೆ. ಇದು ಬಿಜೆಪಿಗೆ ತೀವ್ರ ಮುಜುಗರವನ್ನು ಉಂಟು ಮಾಡಿದ್ದು ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುತ್ತಿರು ವುದು ಎರಡೇ. ಒಂದು ಲಂಚ ಮತ್ತೊಂದು ಮಂಚ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಾಟುವಾಗಿ ಟೀಕಿಸಿದೆ.

ಈ ಬಗ್ಗೆ ಕಾಂಗ್ರೆಸ್ ನಿರಂತರವಾಗಿ ಬಿಜೆಪಿ ಪಕ್ಷವನ್ನು ಮತ್ತು ಮುಖ್ಯಮಂತ್ರಿಗಳನ್ನು ಕಾಲೆಳುಯುತ್ತಿದ್ದು ಜಾರಕಿಹೊಳಿ ಪ್ರಕರಣದ ಬಗ್ಗೆ ಟ್ವೀಟ್ ನಲ್ಲಿ ಹೊಸ ಲೇವಡಿ ಮಾಡಿದೆ. “ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ. ಒಂದು ಲಂಚ ಮತ್ತೊಂದು ಮಂಚ ಎಂದಿದೆ.ಸಿಡಿ ನಿಜಕ್ಕೂ ನಕಲಿಯೇ ಆಗಿದ್ದರೆ ರಮೇಶ್ ಜಾರಕಿಹೊಳಿಯವರು ದೂರು ನೀಡಲು ಮೀನಾಮೇಷ ಎಣಿಸುತ್ತಿರುವುದೇಕೆ ? ಖಾಸಗಿ ಏಜೆನ್ಸಿಗಳ ಮೊರೆ ಹೋಗುವುದೇತಕೆ ? ಸರ್ಕಾರಿ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲವೇ ಅಥವಾ ಬಿಜೆಪಿಗರ ನಡುವಿನ ಒಳ ಜಗಳದ ತಿಕ್ಕಾಟ ದಲ್ಲಿ ತಾವೇ ಬಲಿಯಾಗುವ ಭಯವೇ” ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದು ಇದಕ್ಕೆ ಬಿಜೆಪಿ ಯವರು ಏನು ಉತ್ತರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು