ಈಜಲು ಹೋಗಿ ನೀರುಪಾಲಾದ ಮೂವರು ಮಕ್ಕಳು – ಹುಬ್ಬಳ್ಳಿಯ ಬ್ಯಾಹಟ್ಟಿ ಗ್ರಾಮದಲ್ಲಿ ದುರಂತ…..

Suddi Sante Desk

ಹುಬ್ಬಳ್ಳಿ –

ಈಜಲು ಹೋಗಿ ಮೂವರು ಮಕ್ಕಳು ನೀರುಪಾಲಾದ ಘಟನೆ ಹುಬ್ಬಳ್ಳಿಯ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ‌.ಮನೆ ಹಿಂದಿನ ಮಣ್ಣಿನ ಕ್ವಾರಿಗೆ ಮೂವರು ಮಕ್ಕಳು ಈಜಲು ತೆರಳಿದ್ದರು.ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಈಜಲು ತೆರಳಿದ್ದರು ಮೂವರು ಬಾಲಕರು.ಹರೀಶ ಶಿವಳ್ಳಿ ಗೌಡರ್ (7) ಬಾಲಕನ‌ ಮೃತ ದೇಹ ಪತ್ತೆಯಾಗಿದೆ.

ಕ್ವಾರಿಯಲ್ಲಿದ್ದ ನೀರು ಕುಡಿದು ತೀವೃ ಅಸ್ವಸ್ಥ ಬಾಲಕ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಮತ್ತೊಬ್ಬ ಬಾಲಕ ಗೌತಮ ಶಿವಳ್ಳಿ ಗೌಡನಿಗಾಗಿ ಹುಡುಕಾಟ ನಡೆದಿದೆ.ಅಗ್ನಿಶಾಮದ ದಳದ ಸಿಬ್ಬಂದಿ ಮತ್ತು ಗ್ರಾಮಸ್ಥರಿಂದ ಹುಡುಕಾಟ ನಡೆದಿದೆ

ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.