ಬಾಗಲಕೋಟೆ –
ಸೆಕ್ಸ್ ಸಿಡಿ ವಿಚಾರ ಕುರಿತು ನಮಗೆ ರಕ್ಷಣೆ ಇಲ್ಲ ಎನ್ನುತ್ತಾ ಮತ್ತೊಂದು ವಿಡಿಯೋದಲ್ಲಿ ಯುವತಿ ಹೇಳುತ್ತಿದ್ದಂತೆ ಇತ್ತ ಆ ಯುವತಿಯ ಬೆನ್ನಿಗೆ ಬಾಗಲಕೋಟೆಯ ಗಡೂರು ಗ್ರಾಮಸ್ಥರು ನಿಂತಿದ್ದಾರೆ.

ತಮಗೆ ರಕ್ಷಣೆ ಇಲ್ಲ ಎಂದು ಯುವತಿ ವಿಡಿಯೋದಲ್ಲಿ ಹೇಳಿ ಬಿಡುತ್ತಿದ್ದಂತೆ ಇತ್ತ ಗುಡೂರ ಗ್ರಾಮಸ್ಥರು ಆ ಯುವತಿಯ ಬೆನ್ನಿಗೆ ನಿಂತಿದ್ದಾರೆ.ಇದ್ದು ಗೆಲ್ಲಬೇಕು. ಧೈರ್ಯವಾಗಿರು ಎಂದು ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಗುಡೂರ ಗುಡೂರ ಗ್ರಾಮದಲ್ಲಿನ ಯುವತಿಗೆ ಆತ್ಮಸ್ಥೈರ್ಯ ತುಂಬಲು ಮುಂದಾಗಿದ್ದಾರೆ ಈ ಗ್ರಾಮದ ಜನರು.ಗುಡೂರ ಗ್ರಾಮ ಯುವತಿ ತಂದೆ ಯ ಊರು ಎನ್ನಲಾಗ್ತಿದೆ ಹೀಗಾಗಿ ಈ ಒಂದು ಸಂಬಂಧ ಯುವತಿಯ ಬೆನ್ನಿಗೆ ಜನರು ನಿಂತುಕೊಂಡಿದ್ದಾರೆ.

ಸದ್ಯ ಗುಡೂರ ಗ್ರಾಮದಲ್ಲಿ ಯುವತಿ ಅಜ್ಜಿ ಮಾತ್ರ ವಾಸ ಇದ್ದಾರೆ.ಇತ್ತೀಚಿನ ದಿನಗಳಲ್ಲಿ ಯುವತಿ ಗುಡೂರ ಗ್ರಾಮಕ್ಕೆ ಬಂದಿಲ್ಲ ಎನ್ನಲಾಗ್ತಿದೆ.ಯುವತಿ ತಂದೆ ಮಾತ್ರ ಯಾವಾಗಲೋ ಬಂದು ಹೋಗ್ತಿರ್ತಾರಂತೆ.ಯುವತಿ ಬಗ್ಗೆ ಗ್ರಾಮದಲ್ಲಿ ಬಹುತೇಕ ಜನರಿಗೆ ಮಾಹಿತಿ ಇಲ್ಲವಂತೆ.

ಯುವತಿ ಗುಡೂರ ಗ್ರಾಮ ಮೂಲದವರು ಎನ್ನುವ ಮಾಹಿತಿಯಂತೂ ಸಿಕ್ಕಿದೆ.ಇನ್ನೂ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎಂದು ವಿಡಿಯೋ ದಲ್ಲಿ ಹೇಳಿಕೊಂಡಿರುವ ಹಿನ್ನಲೆಯಲ್ಲಿ ಗುಡೂರ ಗ್ರಾಮದ ಸಾಮಾಜಿಕ ಕಾರ್ಯಕರ್ತೆ ಸಹನಾ ಅಂಗಡಿ ಸೇರಿದಂತೆ ಗ್ರಾಮದ ಜನರು ಯುವತಿಯ ಬೆಂಬಲಕ್ಕೆ ನಿಂತುಕೊಂಡಿದ್ದಾರೆ.

ಯುವತಿ ಹಾಗೂ ಆಕೆಯ ಕುಟುಂಬಸ್ಥರು ಜೀವಕ್ಕೆ ಏನು ಮಾಡಿಕೊಳ್ಳಬಾರದು.ಗುಡೂರ ಗ್ರಾಮಸ್ಥರು ನಿಮ್ಮ ಜೊತೆ ಇರ್ತೆವೆ ಎಂದಿದ್ದಾರೆ.ಜೀವಕ್ಕೆ ಏನಾದ್ರೂ ಮಾಡಿಕೊಂಡ್ರೆ ನಿಮಗೆ ನ್ಯಾಯ ಸಿಗಲ್ಲ. ನೀವು ಇದ್ದು ನ್ಯಾಯ ಗೆಲ್ಲಬೇಕು ಎಂದಿದ್ದಾರೆ.

ನಿಮಗೆ ತೊಂದ್ರೆ ಇದ್ರೆ ಗುಡೂರ ಗ್ರಾಮಸ್ಥರನ್ನು ಸಂಪರ್ಕಿಸಿ.ಗುಡೂರ ಗ್ರಾಮದಲ್ಲಿ ಯುವತಿ ಅಜ್ಜಿ ಮಾತ್ರ ಇದ್ದಾರೆ.ಸಿಡಿ ಪ್ರಕರಣದ ಬಳಿಕ ಒಮ್ಮೆ ಪೊಲೀಸರು ಮನೆಗೆ ಬಂದು ಹೋಗಿದ್ದಾರೆ ಎನ್ನುವ ಮಾಹಿತಿ ಇದೆ.ಅಜ್ಜಿಗೆ 80 ವಯಸ್ಸು ಆಗಿದ್ದು, ಕಿವಿ ಸರಿಯಾಗಿ ಕೇಳಲ್ಲ-ಕಣ್ಣು ಸರಿಯಾಗಿ ಕಾಣಲ್ಲವಂತೆ. ಹೀಗಾಗಿ ಸದ್ಯ ಅಜ್ಜಿಗೆ ಯಾವುದೇ ಮಾಹಿತಿ ಇಲ್ಲ ಎನ್ನಲಾಗ್ತಿದೆ. ಏನೇ ಆಗಲಿ ಯುವತಿ ನೋವಿನ ಮಾತು ಹೇಳುತ್ತಿದ್ದಂತೆ ಅವರ ಬೆನ್ನಿಗೆ ಗ್ರಾಮಸ್ಥರು ನಿಂತುಕೊಂಡು ಧೈರ್ಯ ತುಂಬಿದ್ದಾರೆ.