ಧಾರವಾಡ –
ಅದ್ಯಾಕೋ ಏನೋ ಧಾರವಾಡ ಐತಿಹಾಸಿಕ ಕೆಲಗೇರಿ ಕೆರೆಯಲ್ಲಿ ಏನು ಮಾಡಿದರು ನಡೆಯುತ್ತದೆ ಏನು ಬೇಕಾದರೂ ಮಾಡಬಹುದು ಎಂಬಂತೆ ಕಾಣುತ್ತಿದೆ.ಹೌದು ಇದಕ್ಕೆ ಸಾಕ್ಷಿ ಕೆರೆಯಲ್ಲಿ ಕಂಡು ಬರುವ ಚಿತ್ರಣವೇ ಕೈಗನ್ನಡಿಯಾಗಿದೆ.
ಹೂ….ತೊಳೀರಿ ತೊಳೀರಿ ಜೇಸಿಬಿನೂ ತೊಳೀರಿ…ಕಾರೂ ತೊಳೀರಿ ಹೆಂಗ ಪಾಳೀ ಹಚ್ಯಾರ ನೋಡ್ರಿ ನಮ್ಮ ಕೆಲಗೇರಿ ಕೆರೆಯಾಗ ಗಾಡಿ ತೊಳ್ಳಯಾಕಂತ. ಇಂತಹ ಚಿತ್ರಣ ಕೆರೆಯಲ್ಲಿ ಕಂಡು ಬರುತ್ತಿದೆ. ಹಿಂಗಾದ್ರ ಕೆರೆ ಜಲಮಾಲಿನ್ಯ ಆಗದಂಗ ಉಳಿಸಿಕೊಳ್ಳೋದ ಹೆಂಗ್ರಿ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ಕೇಳತಾ ಇದ್ದಾರೆ.
ಅಲ್ಲಿ ಅಪಾಯಕಾರಿ ಗುಂಡಿ ಅದಾವು ಎಂಬ ಚಿಂತೆ ಇಲ್ಲದೇ ಬಿಂದಾಸ್ ಆಗಿ ಕೆರೆಯ ದಂಡೆಯಲ್ಲಿ ನಿಂತುಕೊಂಡು ವಾಹನಗಳನ್ನು ತೊಳಿತಾ ಇದ್ದಾರೆ. ಇನ್ನೂ ಇತ್ತೀಚಿಗೆ ಒಬ್ಬರು ಅದೇ ಜಾಗದಲ್ಲಿ ಆಟೋತೊಳ್ಯಾಕಂತ ಹೋಗಿ ಸತ್ತಾರ, ತಮ್ಮ ಜೀವದ್ದರ ಖಬರ ಇಲ್ಲದೇ ಹೀಗೆ ಮಾಡತಾ ಇರುವ ಇಂಥವರಿಗೆ ಕಡಿವಾಣ ಹಾಕಿ ನಿಯಂತ್ರಣ ಮಾಡೊರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ.