ಹುಬ್ಬಳ್ಳಿ-
ಸಾರ್ವಜನಿಕರ ಮನವಿ ಮೇರೆಗೆ ಹುಬ್ಬಳ್ಳಿಯ ಕೋಪ್ಪಿಕರ್ ಹಾಗೂ ದಾಜೀಬಾನ್ ಪೇಟೆ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

ದಾಜೀಬಾನ್ ಪೇಟೆ, ಪೆಂಡಾರಗಲ್ಲಿ, ಬೆಳವಾಗ್ ಗಲ್ಲಿ, ದುರ್ಗದ ಬೈಲು, ಕಲಾದಗಿ ಓಣಿಗಳಲ್ಲಿ ಅನಧಿಕೃತವಾಗಿ ಪಾಲಿಕೆ ಜಾಗವನ್ನು ಒತ್ತುವರಿ ಮಾಡಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಚರಣೆ ನೇತೃತ್ವ ವಹಿಸಿದ ಕಾರ್ಯಾಚರಣೆ ಮಾಡಿದರು.

ಕಳೆದ ಹದಿನೈದು ದಿನಗಳ ಹಿಂದೆ ಜಿಲ್ಲಾಡಳಿತ, ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳ ಸಹಯೋಗದಲ್ಲಿ ಒತ್ತುವರಿ ತೆರವು ಮಾಡಿ ಎಚ್ಚರಿಕೆ ನೀಡಲಾಗಿತ್ತು.ವ್ಯಾಪರಿಗಳಿಗೆ ಪುನಃ ಪುಟ್ ಪಾತ್ ಒತ್ತುವರಿ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಆದ್ದರಿಂದ ರಸ್ತೆ ಹಾಗೂ ಪುಟ್ ಪಾತ್ ಮೇಲೆ ಇರಿಸಿದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಒತ್ತುವರಿ ಕಾರ್ಯಾಚರಣೆ ಇಂದಿಗೆ ಮುಗಿಯುವು ದಿಲ್ಲ. ಪ್ರತಿದಿನ ಮುಂದುವರಿಸಲಾಗುವದು. ಹುಬ್ಬಳ್ಳಿ ನಗರದ ಕೊಪ್ಪಿಕರ್ ಹಾಗೂ ದಾಜಿಬಾನ್ ಪೇಟೆ ರಸ್ತೆಗಳು ಹೆಸರು ವಾಸಿಯಾಗಿವೆ. ರಸ್ತೆಗಳು ಸಾಕಷ್ಟು ಅಗಲವಾಗಿದ್ದರು, ವ್ಯಾಪಾರಿಗಳು ರಸ್ತೆ ಹಾಗೂ ಪುಟ್ ಪಾತ್ ಒತ್ತುವರಿ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು.
ಪಾಲಿಕೆಯಿಂದ 24 ಕಡೆ ಪಾದಯಾತ್ರಿಗಳ ಸಂಚಾರಿ ವಲಯಗಳನ್ನು ಗುರುತಿಸಲಾಗಿದೆ.

ಶೀಘ್ರವಾಗಿ ಅಧಿಸೂಚನೆ ಹೊರಡಿಸಲಾಗುವುದು. ರಸ್ತೆ ಬದಿ ವ್ಯಾಪಾರಿಗಳಿಗಿಂತ ಮಳಿಗೆ ಹೊಂದಿರುವ ವ್ಯಾಪಾರಿಗಳು ಫುಟ್ ಪಾತ್ ಗಳನ್ನು ಅತಿಕ್ರಮಿಸಿ ದ್ದಾರೆ. ಅಂಗಡಿಯನ್ನು ಗೋಡನ್ ತರ ಬಳಸಿ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇಂತಹ ವ್ಯಾಪಾರಿಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಪಾಲಿಕೆಯಿಂದ ಕಾರ್ಯಾಚರಣೆ ಮುಂದುವರಿಸು ತ್ತಾರೆ. ಅಂಗಡಿಗಳ ಮಾಲಿಕರಿಗೆ ಎಚ್ಚರಿಕೆ ನೀಡಲಾಗುವುದು. ಹುಬ್ಬಳ್ಳಿ ಧಾರವಾಡ ನಗರದಲ್ಲಿ ಪಾರ್ಕಿಂಗ್ ಸಲುವಾಗಿ 94 ರಸ್ತೆಗಳನ್ನು ಗುರುತಿಸಲಾಗಿದೆ.ಇದನ್ಮು ಪಾಲಿಕೆಯಿಂದ ಪೊಲೀಸ್ ಕಮಿಷನರ್ ಅವರಿಗೆ ಕಳುಹಿಸಿಕೊಡ ಲಾಗಿದೆ. ಶೀಘ್ರವಾಗಿ ಪೊಲೀಸ್ ಆಯುಕ್ತರು ಅಧಿಸೂಚನೆ ಹೊರಡಿಸುವರು. 54 ಬೀದಿ ಬದಿ ವ್ಯಾಪಾರಿ ರಸ್ತೆಗಳನ್ನು ಸಹ ಗುರುತಿಸ ಲಾಗಿದೆ ಇದನ್ನು ಅಧಿಸೂಚಿಸಲಾಗಿದೆ. ಕೊಪ್ಪಿಕರ್ ಹಾಗೂ ದಾಜಿಬಾನ್ ಪೇಟೆ ರಸ್ತೆಗಳು 18 ಮೀಟರ್ ಅಗಲವಾಗಿವೆ. ನಕ್ಷೆಯ ಅನುಸಾರ ರಸ್ತೆಯನ್ನು ಅಳೆದು ಒತ್ತುವರಿಯಾಗಿದ್ದರೆ ಅದನ್ನು ಸಹ ತೆರವುಗೊಳಿಸಲಾಗುವುದು ಎಂದರು.

ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಉಪ ಪೊಲೀಸ್ ಆಯುಕ್ತ ರಾಮರಾಜನ್, ಉಪ ವಿಭಾಗಾಧಿಕಾರಿ ಗೋಪಾಲಕೃಷ್ಣಾ, ಹುಬ್ಬಳ್ಳಿಯ ತಹಶಿಲ್ದಾರ ಶಶಿಧರ ಮಾಡ್ಯಾಳ ಸೇರಿದಂತೆ ಪಾಲಿಕೆ ವಲಯ ಅಧಿಕಾರಿಗಳು, ಪೊಲೀಸ್ ಹಾಗೂ ಪಾಲಿಕೆ ಸಿಬ್ಬಂದಿ ಉಪಸ್ಥಿತಿರಿದ್ದರು.