ಮೂರು ಕೃಷಿ ವಿಧೇಯಕಗಳನ್ನು ವಾಪಸ್ಸು ಪಡೆದ ಕೇಂದ್ರ ಸರ್ಕಾರ ಕೊನೆಗೂ ರೈತರ ಹೋರಾಟಕ್ಕೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ…..

Suddi Sante Desk

ನವದೆಹಲಿ –

ಕೊನೆಗೂ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಣಿದಿದೆ‌.ಹೌದು ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರಿಂದ ಸಾಕಷ್ಟು ತೀವ್ರವಾದ ಮತ್ತು ಆಕ್ರೋಶ ವ್ಯಕ್ತವಾದ ಬಳಿಕ ಕೇಂದ್ರ ಸರ್ಕಾರ ಇಂದು ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆದಿದೆ. ಇಂದು ಬೆಳಗ್ಗೆ 9 ಗಂಟೆಗೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕಾನೂನು ಗಳನ್ನು ರದ್ದುಗೊಳಿಸುವ ಮಹತ್ವದ ಘೋಷಣೆ ಮಾಡಿ ದರು.ಕಳೆದ ಒಂದು ವರ್ಷಗಳಿಂದ ರೈತರು ನಿರಂತರವಾಗಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿಕೊಂಡು ಬಂದಿದ್ದರು. ಕೊನೆಗೂ ರೈತರ ಪ್ರತಿಭಟನೆಗಳಿಗೆ ಮಣಿದಿ ರುವ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ.

ನಾನು 2014ರಲ್ಲಿ ಪ್ರಧಾನಿ ಆದಾಗ ನಮ್ಮ ಸರ್ಕಾರವೂ ರೈತರ ಕಲ್ಯಾಣ ಮತ್ತು ಅಭಿವೃದ್ಧಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದೆ ಎಂದ ಪ್ರಧಾನಿ ಮೋದಿ, ಇದೇ ಸಂದರ್ಭದಲ್ಲಿ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮಹತ್ವದ ಘೋಷಣೆ ಮಾಡಿದರು.

ರೈತರ ಶ್ರಮಕ್ಕೆ ತಕ್ಕ ಮೊತ್ತ ಸಿಗುವಂತೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾವು ಗ್ರಾಮೀಣ ಮೂಲಸೌಕರ್ಯ ಮಾರುಕಟ್ಟೆಯನ್ನು ಬಲಪಡಿಸಿದ್ದೇವೆ. ನಾವು ಎಂಎಸ್‌ಪಿ ಹೆಚ್ಚಿಸಿರುವುದು ಮಾತ್ರವಲ್ಲದೆ ದಾಖಲೆಯ ಸರ್ಕಾರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ ನಮ್ಮ ಸರ್ಕಾರದ ಸಂಗ್ರಹಣೆಯು ಕಳೆದ ಹಲವು ದಶಕಗಳ ದಾಖಲೆಯನ್ನು ಮುರಿದಿದೆ ರೈತರಿಗೆ ಸಮಂಜಸವಾದ ದರದಲ್ಲಿ ಬೀಜಗಳನ್ನು ಒದಗಿಸಲು ಮತ್ತು ಸೂಕ್ಷ್ಮ ನೀರಾವರಿ 22 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್‌ಗಳಂ ತಹ ಸೌಲಭ್ಯಗಳನ್ನು ಒದಗಿಸಲು ನಾವು ಕೆಲಸ ಮಾಡಿ ದ್ದೇವೆ. ಇಂತಹ ಅಂಶಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಗಿವೆ. ನಾವು ಫಸಲ್ ಬಿಮಾ ಯೋಜನೆಯನ್ನು ಬಲಪಡಿಸಿದ್ದೇವೆ ಹಾಗೂ ಹೆಚ್ಚಿನ ರೈತರನ್ನು ಅದರ ಅಡಿಯಲ್ಲಿ ತಂದಿದ್ದೇವೆ ಎಂದರು.

ನಾವು ಎಲ್ಲಾ 3 ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ತಿಂಗಳು ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಕಾರ್ಯವಿಧಾನವನ್ನು ಪ್ರಾರಂಭಿಸುತ್ತೇವೆ. ರೈತರು ತಮ್ಮ ಕುಟುಂಬಗಳಿಗೆ ಮರಳಲು ನಾನು ಒತ್ತಾಯಿ ಸುತ್ತೇನೆಯಾವುದೇ ಪ್ರತಿಭಟನೆಗಳು ಮಾಡದಂತೆ ಪ್ರಧಾನಿ ಮೋದಿ ಮನವಿ ಮಾಡಿದರು ಇಲ್ಲಿಯವರೆಗೆ ನಾನೇನು ಮಾಡಿದ್ದೇನೆ ಅದೆಲ್ಲವು ರೈತರಿಗಾಗಿ ಮಾಡಿದ್ದೇನೆ.ನಾನು ಮಾಡುತ್ತಿರುವುದೆಲ್ಲ ನನ್ನ ದೇಶಕ್ಕಾಗಿ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.