ಶಿಕ್ಷಕ ವಾಯ್ ಬಿ ಕಡಕೋಳ ರ ಐದು ಕೃತಿಗಳು ಬಿಡುಗಡೆ – ಏಕಕಾಲದಲ್ಲಿ ಶಿಕ್ಷಕರ ಸಂಘಗಳ ಪರಿಷತ್ತಿನ ಕಾರ್ಯಕ್ರಮ ದಲ್ಲಿ ಗಣ್ಯರಿಂದ ಬಿಡುಗಡೆ…..

Suddi Sante Desk

ಧಾರವಾಡ –

ಶಿಕ್ಷಕ ವಾಯ್ ಬಿ ಕಡಕೋಳ ಅವರ ಸಂಪಾದಿತ ಐದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಹೌದು ಧಾರವಾಡ ದಲ್ಲಿ ಹಮ್ಮಿಕೊಂಡಿದ್ದ ಅಕ್ಷರ ತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ ಮತ್ತು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು ಧಾರವಾಡ ಸಂಸ್ಥೆ ಯ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ದಲ್ಲಿ ಕೃತಿಗಳನ್ನು ಬಿಡುಗಡೆ ಮಾಡಲಾಯಿತು

ಕೃತಿಗಳಾದ ಸ್ವರ್ಗ ನರಕ,ಹಬ್ಬಗಳ ಸಿರಿ,ಬದುಕು ಬರಹ, ಅಡುಗೆ ವೈವಿಧ್ಯ,ತುಂಬಿದ ಹೊಳೆ ಹೀಗೆ ಐದು ಕೃತಿ ಗಳನ್ನು ಬಿಡುಗಡೆ ಮಾಡಲಾಯಿತು.ಉಪ್ಪಿನ ಬೆಟಗೇರಿ ಯ ಮೂರು ಸಾವಿರ ಮಠದ ಮ ನಿ ಪ್ರ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಒಂದು ಕಾರ್ಯಕ್ರಮ ದಲ್ಲಿ ಶ್ರೀಮತಿ ವಿದ್ಯಾ ನಾಡಿಗೇರ, ಶಂಕರ ಹಲಗತ್ತಿ,ಶ್ರೀಮತಿ ಲೂಸಿ ಕೆ ಸಾಲ್ಡಾನ, ಗುರುಮೂರ್ತಿ ಯರಗಂಬಳಿಮಠ,ವಾಯ್ ಬಿ ಕಡಕೋಳ, ಬಾಬಾಜಾನ ಮುಲ್ಲಾ,ಎಸ್ ವೈ ಸೊರಟಿ, ಸಂಗಮೇಶ ಖನ್ನಿನಾಯ್ಕರ,ಆರ್ ನಾರಾಯಣಸ್ವಾಮಿ ಚಿಂತಾಮಣಿ, ಎಲ್ ಐ ಲಕ್ಕಮ್ಮನವರ, ಅಶೋಕ ಸಜ್ಜನ, ಚಂದ್ರಶೇಖರ್ ತಿಗಡಿ,ಗುರು ತಿಗಡಿ,ಶಂಕರ ಗಟ್ಟಿ,ಸುರೇಶ ಗೋವಿಂದರಡ್ಡಿ, ಭೀಮಪ್ಪ ಕಸಾಯಿ,ಎಸ್ ಎಫ್ ಪಾಟೀಲ್ ಮಲ್ಲಿಕಾರ್ಜುನ ಉಪ್ಪಿನ, ಗುರು ಪೋಳ ಸೇರಿದಂತೆ ಹಲವರು ಉಪಸ್ಥಿತರಿ ದ್ದರು.ಇದೇ ವೇಳೆ ಕಡಕೋಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.