ಬೆಂಗಳೂರು –
ರಾಜ್ಯದಲ್ಲಿ ಮತ್ತು ರಾಜ್ಯದ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಾ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿ ರುವುದು ರಾಸಲೀಲೆ ಸಿಡಿ ಪ್ರಕರಣ. ಈ ಒಂದು ಸಿಡಿ ವಿಚಾರ ಇದೀಗ ಸಿನಿಮಾ ಆಗುತ್ತಿದೆ.ಹೌದು ಕನ್ನಡ ಫಿಲ್ಮ್ ಚೇಂಬರ್ ನಲ್ಲಿ ‘ಸಿಡಿ ಲೇಡಿ’ ಸಿನಿಮಾ ಟೈಟಲ್ ರಿಜಿಸ್ಟರ್ ಆಗಿದೆ.

ನಿರ್ಮಾಪಕ ಸಂದೇಶ್ ನಾಗರಾಜ್ ಬ್ಯಾನರ್ ನಲ್ಲಿ ಸಿಡಿ ಲೇಡಿ ಹೆಸರು ನೋಂದಣಿ ಆಗಿದ್ದು, ಸಿಡಿ ಪ್ರಕ ರಣ ಸಿನಿಮಾ ಆಗುತ್ತಿದೆ. ಸಿಡಿಲೇಡಿ ಸಿನಿಮಾ ಸಿಡಿ ಕೇಸ್ ಕುರಿತ ಸಿನಿಮಾನಾ? ನಟ-ನಟಿ ಯಾರು? ಯಾವಾಗ ಬಿಡುಗಡೆ ಆಗುತ್ತೆ ಎಂಬ ಕುರಿತು ಸಾರ್ವ ಜನಿಕ ವಲಯದಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಚರ್ಚೆ ಶುರುವಾಗಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಮಾರ್ಚ್ 2 ರಂದು ವೈರಲ್ ಆಗಿತ್ತು ಇದ ಬಳಿಕ ನಡೆದ ಬೆಳವಣಿಗೆಯಲ್ಲಿ ರಮೇಶ್ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಇದೀಗ ಪ್ರಕರಣವನ್ನು ಎಸ್ ಐಟಿ ತನಿಖೆ ನಡೆಸುತ್ತಿದೆ.ಸಾಕಷ್ಟು ಪ್ರಮಾಣ ದಲ್ಲಿ ಬೆಳವಣಿಗೆಗಳು ನಡೆದಿದ್ದು ಈಗ ಇವೆಲ್ಲದರ ನಡುವೆ ಚಿತ್ರವೊಂದು ನಿರ್ಮಾಣವಾಗುತ್ತಿದ್ದು ಸಧ್ಯ ಟೈಟಲ್ ನೊಂದಣಿ ಯಾಗಿದೆ