ಬೆಂಗಳೂರು –
ಕರ್ನಾಟಕ ವಿಧಾನ ಸಭಾ ಕಲಾಪ ಆರಂಭವಾಗು ತ್ತಿದ್ದಂತೆ ಸಿಡಿ ಯೊಂದಿಗೆ ಸದನದ ಬಾವಿಗೆ ಇಳಿದ ಕೈ ಪಕ್ಷದ ನಾಯಕರು ಪ್ರತಿಭಟನೆ ಮಾಡಲು ಆರಂಭ ಮಾಡಿದರು. ಕೈ ಪಕ್ಷದ ನಾಯಕರೆಲ್ಲರೂ ಕೈಯ ಲ್ಲೊಂದು ಸಿಡಿ ಗಳನ್ನು ಹಿಡಿದುಕೊಂಡು ಬಂದು ಸದನದ ಬಾವಿಗೆ ಇಳಿದು ಪ್ರತಿಭಟನೆ ಮಾಡಲು ಮುಂದಾದರು.

ಪ್ರಶ್ನೋತ್ತರ ಸಮಯ ಆರಂಭವಾಗಬೇಕಿತ್ತು ಆದರೆ ಇದಕ್ಕೆ ಅವಕಾಶವನ್ನು ಕೊಡದ ಕಾಂಗ್ರೇಸ್ ಪಕ್ಷದ ನಾಯಕರು ಕಲಾಪ ನಡೆಯಲು ಅವಕಾಶವನ್ನು ಕೊಡದೇ ಸಿಡಿಯನ್ನು ಹಿಡಿದುಕೊಂಡು ಪ್ರತಿಭಟನೆ ಮಾಡಲು ಮುಂದಾದರು.

ಪ್ರತಿಭಟನೆ ಜೋರಾಗುತ್ತಿದ್ದಂತೆ ಸದನವನ್ನು ವಿಧಾನಸಭೆಯ ಸಭಾಪತಿಯವರು ಹತ್ತು ನಿಮಿಷ ಗಳ ಮುಂದೂಡಿದರು. ಸದನ ಆರಂಭವಾಗುತ್ತಿದ್ದಂ ತೆ ನಿನ್ನೇ ಆರಂಭವಾಗಿದ್ದ ಸಿಡಿ ವಿಚಾರ ಕುರಿತಂತೆ ಮತ್ತೇ ಅದನ್ನೇ ಮುಂದಿಟ್ಟುಕೊಂಡು ಕೈ ಪಕ್ಷದವರು ಸದನದ ಬಾವಿಗೆ ಇಳಿದು ಪ್ರತಿಭಟನೆ ಮಾಡಿದರು.

ಇನ್ನೂ ಇದನ್ನು ಅರಿತ ಸಭಾಪತಿಯವರು ಎರಡು ಪಕ್ಷದವರನ್ನು ಕರೆದು ಸಂಧಾನ ಮಾಡಲು ಮುಂದಾದರು ಆದರೂ ಕೂಡಾ ವರ್ಕೌಟ್ ಆಗಲಿಲ್ಲ.