ಮೈಸೂರು –
ಸಂಚಾರಿ ಪೊಲೀಸರಿಂದಲೇ ಬೈಕ್ ಸವಾರ ನೊಬ್ಬನು ಸಾವಿಗೀಡಾಗಿದ್ದಾರೆಂದು ಆರೋಪಿಸಿ ಮೈಸೂರಿನಲ್ಲಿ ನಿನ್ನೆ ಸಾರ್ವಜನಿಕರು ನಡುರಸ್ತೆ ಯಲ್ಲಿ ಸಂಚಾರಿ ಪೊಲೀಸರ ಮೇಲೆ ಹಲ್ಲೆ ಮಾಡಿ ದ್ದರು. ಹೆಲ್ಮೆಟ್ ಸೇರಿದಂತೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳ ನ್ನು ತಗೆದುಕೊಂಡು ನಡು ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಥಳಿಸಿ ಆಕ್ರೋಶವನ್ನು ವ್ಯಕ್ತಪಡಿಸಿ ದ್ದರು.ಅಲ್ಲದೇ ಪೊಲೀಸ್ ವಾಹನಗಳನ್ನು ಜಖಂ ಮಾಡಿದ್ದರು. ಇದೆಲ್ಲದರ ನಡುವೆ ಈಗಾಗಲೇ ಮೂವರು ಸಂಚಾರಿ ಪೊಲೀಸ್ ಸಿಬ್ಬಂದಿ ಗಳಿಂದ ದೂರನ್ನು ಸ್ವೀಕರಿಸಿ ಈಗಾಗಲೇ ಹಲವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತನಿಖೆಯನ್ನು ಮಾಡತಾ ಇದ್ದಾರೆ.

ನಡು ರಸ್ತೆಯಲ್ಲಿ ಸಾರ್ವಜನಿಕರು ಹಿಗ್ಗಾ ಮುಗ್ಗಾ ಅಟ್ಯಾಕ್ ಮಾಡಿದ ಪ್ರಕರಣವನ್ನು ಮೈಸೂರಿನ ಸಂಚಾರಿ ಪೊಲೀಸರು ಗಂಭೀರವಾಗಿ ಪರಿಗಣಿಸಿ ಈಗಾಗಲೇ ಹಲವರನ್ನು ವಶಕ್ಕೆ ತೆಗೆದುಕೊಂಡು ಡ್ರೀಲ್ ಮಾಡತಾ ಇದ್ದಾರೆ.

ಹಿಂದೆ ಮುಂದೆ ನೋಡದೇ ಸಂಚಾರಿ ಪೊಲೀಸ ರದ್ದು ತಪ್ಪು ಇದೆ ಎಂದುಕೊಂಡು ಸಾರ್ವಜನಿಕರು ನಡು ರಸ್ತೆಯಲ್ಲಿ ಥಳಿಸಿದ್ದರು ನಿನ್ನೆ ಹೀಗೆ ಥಳಿಸಿ ವರಿಗೆ ಪೊಲೀಸರು ಇಂದು ಅವರೆಲ್ಲರನ್ನು ವಶಕ್ಕೆ ತೆಗೆದುಕೊಂಡು ಬೆಂಡೆತ್ತಿದ್ದಾರೆ.

ಈಗಾಗಲೇ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ಮಾಡತಾ ಇದ್ದಾರೆ.
ನಿನ್ನೆ ಹಾಗೇ ಮಾಡಿದವರನ್ನು ಇಂದು ಪೊಲೀಸರು ವಶಕ್ಕೆ ತೆಗೆದುಕೊಂಡು ದೂರನ್ನು ದಾಖಲು ಮಾಡಿ ಕೊಂಡು ತನಿಖೆಯನ್ನು ಮಾಡತಾ ಇದ್ದಾರೆ