ಧಾರವಾಡ –
ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಯುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡದಲ್ಲಿ ಮೊದಲ ಬಾರಿಗೆ ಧಾರವಾಡ ಚಾಂಪಿಯನ್ಸ್ ಲೀಗ್ ಕ್ರಿಕೇಟ್ ಪಂದ್ಯಾವಳಿ ನಡೆಯುತ್ತಿದೆ.

ಮಾಜಿ ಸಚಿವ ಸಂತೋಷ ಲಾಡ್ ಮಾರ್ಗದರ್ಶನ ಮತ್ತು ಅವರ ನಿರ್ದೇಶನದ ಮೇರೆಗೆ ಮೊದಲ ಬಾರಿದೆ ನಗರದಲ್ಲ ದೊಡ್ಡ ಪ್ರಮಾಣದಲ್ಲಿ ಈ ಒಂದು ಪಂದ್ಯಾವಳಿ ನಡೆಯುತ್ತಿದೆ. ಇನ್ನೂ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಪಾಲ್ಗೊಳ್ಳಲಿದ್ದು ಪಂದ್ಯಾವಳಿಯ ಮುಂಚಿತವಾಗಿ ನಗರದಲ್ಲಿ ತಂಡಗಳ ಖರೀದಿ ನಡೆಯಿತು.ಒಟ್ಟು ಎಂಟು ತಂಡಗಳನ್ನು ಖರೀದಿ ಮಾಡಲಾಗಿದ್ದು ಏಪ್ರೀಲ್ 2 ರಿಂದ ನಗರದಲ್ಲಿ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ಸೆಣಸಾಡಲಿವೆ.

ಇನ್ನೂ ಮಾಜಿ ಸಚಿವ ಸಂತೋಷ ಲಾಡ್ ಆಪ್ತ ವಾಯವ್ಯ ಸಾರಿಗೆ ಸಂಸ್ಥೆಯ ಮಾಜಿ ನಿರ್ದೇಶಕ ಅನಿಲ ಕಲಾಲ ಅವರ ನೇತ್ರತ್ವದಲ್ಲಿ ಉಸ್ತುವಾರಿ ಯಲ್ಲಿ ಈ ಒಂದು ಟೂರ್ನಾಮೆಂಟ್ ನಡೆಯುತ್ತಿದ್ದು ಫಸ್ಟ್ ಕ್ರಿಕೇಟ್ ಅಕ್ಯಾಡೆಮಿ ಸಂಸ್ಥೆಯ ಸಂದೀಪ ಪೈ ಅವರು ಮುಂದಾಳತ್ವವನ್ನು ತಗೆದುಕೊಂಡಿದ್ದಾರೆ. ನಗರದ ಕೆಯುಡಿ ಮೈದಾನದಲ್ಲಿ ಏಪ್ರೀಲ್ 2 ರಂದು ಏಪ್ರೀಲ್ 10 ವರೆಗೆ ಪಂದ್ಯಾವಳಿ ನಡೆಯಲಿದ್ದು ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಯುವಕ ರಿಗೆ ಅನುಕೂಲ ಆಗಲೆಂದು ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದು ಆನಂದ ಕಲಾಲ ಹೇಳಿದ್ದಾರೆ.