ಮುಚ್ಚಿದ ಸರ್ಕಾರಿ ಶಾಲೆಗೆ ಮರು ಜೀವ – ಹತ್ತು ವರ್ಷಗಳ ನಂತರ ಬಾಗಿಲು ತೆರೆದ ಶಾಲೆಯಲ್ಲಿ ಸಂಭ್ರಮ ಸಡಗರ…..

Suddi Sante Desk

ಚಿಕ್ಕನಾಯಕನಹಳ್ಳಿ –

ಕಳೆದ ಹತ್ತು ವರ್ಷಗಳಿಂದ ಬಾಗಿಲು ಮುಚ್ಚಿದ್ದ ಸರ್ಕಾರಿ ಶಾಲೆಯೊಂದಕ್ಕೆ ಮರುಜೀವ ನೀಡಿದ ಘಟನೆ ಚಿಕ್ಕ ನಾಯಕನಹಳ್ಳಿ ಯಲ್ಲಿ ನಡೆದಿದೆ.ಹೌದು ತಾಲ್ಲೂಕಿನ ಬರಗೂರು ಕ್ಲಸ್ಟರ್‌ ವ್ಯಾಪ್ತಿಯ ಯರೇಕಟ್ಟೆ ಸರ್ಕಾರಿ ಶಾಲೆಗೆ 10 ವರ್ಷಗಳ ನಂತರ ಗ್ರಾಮಸ್ಥರು ಮರುಜೀವ ನೀಡಿದ್ದಾರೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ್ದ ಶಾಲೆ ಯಲ್ಲಿ ಮತ್ತೆ ಮಕ್ಕಳ ಕಲರವ ಕೇಳುತ್ತಿದೆ.ಸುಮಾರು 30 ಕುಟುಂಬಗಳಿರುವ ಗ್ರಾಮದಿಂದ ಅಕ್ಕಪಕ್ಕದ ಗ್ರಾಮಗಳ ಶಾಲೆಗೆ ಮಕ್ಕಳು ಹೋಗುತ್ತಿದ್ದರು.ಗ್ರಾಮದಲ್ಲಿ ಶಾಲೆ ಯೊಂದು ಇರಬೇಕೆಂಬ ಗ್ರಾಮಸ್ಥರ ಬೇಡಿಕೆಯಂತೆ ಮೂರು ದಶಕಗಳ ಹಿಂದೆ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗಿತ್ತು ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿತ್ತು ಕ್ರಮೇಣ ಇಳಿಮುಖವಾಯಿತು ಹೀಗಾಗಿ ಶಾಲೆಯನ್ನು ಬಂದ್ ಮಾಡಲಾಗಿತ್ತು.

ವಿದ್ಯಾರ್ಥಿಗಳ ಕೊರತೆಯಿಂದ 10 ವರ್ಷಗಳ ಹಿಂದೆ ಶಿಕ್ಷಣ ಇಲಾಖೆ ಆದೇಶದಂತೆ ಶಾಲೆಯನ್ನು ಮುಚ್ಚಲಾಗಿತ್ತು ಶಾಲೆ ಮುಚ್ಚುವ ವೇಳೆ ವಿದ್ಯಾರ್ಥಿಗಳ ಹಾಜರಾತಿ 2ಕ್ಕೆ ಇಳಿದಿತ್ತು. ಶಾಲೆಯ ದಾಖಲಾತಿಗಳನ್ನು ಪಕ್ಕದ ಬರಗೂರು ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಿ ಶಾಲೆಯನ್ನು ಮುಚ್ಚಲಾ ಯಿತು.ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿದ್ದ ಕೆಲವು ಪೋಷಕರು ದೂರದ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿದ್ದರು. ಕೆಲವು ವಿದ್ಯಾರ್ಥಿಗಳು ಮಾತ್ರ ಅಕ್ಕಪ ಕ್ಕದ ಶಾಲೆಗಳಿಗೆ ಹೋಗುತ್ತಿದ್ದರು.

ಶಾಲೆಯನ್ನು ಮುಚ್ಚಿದ ಕಾರಣಕ್ಕಾಗಿ ಬೇರೆ ಬೇರೆ ಊರು ಗಳಲ್ಲಿ ನೆಲೆ ಕಂಡುಕೊಂಡಿದ್ದ ಗ್ರಾಮಸ್ಥರು ಕೋವಿಡ್‌ ಸಂಕಷ್ಟದ ನಂತರ ಮತ್ತೆ ಗ್ರಾಮಕ್ಕೆ ಬಂದಿದ್ದಾರೆ. ತಮ್ಮೂ ರಿನ ಶಾಲೆಯತ್ತ ಗಮನ ಹರಿಸಿದ್ದಾರೆ ಗ್ರಾಮದ ಕೆಲವು ಯುವಕರು ಗ್ರಾಮದಲ್ಲಿ ಸಭೆ ನಡೆಸಿ ತಮ್ಮೂರಿನ ಶಾಲೆ ಯನ್ನು ಮತ್ತೆ ಪ್ರಾರಂಭಿಸುವ ಪಣತೊಟ್ಟು ಶಾಲೆಯ ಆರಂಭಕ್ಕೆ ಕಾರಣರಾಗಿದ್ದಾರೆ. ಶಾಲೆಗೆ 1 ರಿಂದ 4 ನೇ ತರಗತಿವರೆಗೆ 16 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹತ್ತು ವರ್ಷಗಳಿಂದ ಬಣಗುಡುತ್ತಿದ್ದ ಶಾಲೆ ಕಟ್ಟಡದಲ್ಲಿ ಮತ್ತೆ ಮಕ್ಕಳ ನಗು ಚೆಲ್ಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.