ಬಾಗಲಕೋಟೆ –
ಕುರಿಗಳ್ಳರನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಕುರಿಗಾಹಿಗಳಿಬ್ಬರು ಕುರಿಗಳನ್ನು ಕಳ್ಳತನ ಮಾಡುತ್ತಿ ರುವಾಗ ಇವರು ಸಿಕ್ಕಿ ಬಿದ್ದಿದ್ದಾರೆ.ಕೈಗೆ ಸಿಕ್ಕಿ ಬೀಳು ತ್ತಿದ್ದಂತೆ ಸಾರ್ವಜನಿಕರು ಥಳಿಸಿದ್ದಾರಂತೆ.
ಕುರಿ ಕಳ್ಳರಿಬ್ಬರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ ಸುತಗುಂಡಾರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಕುರಿ ಕಳ್ಳತನ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ ಕುರಿ ಕಳ್ಳರು ಇನ್ನೂ ಇವರಿಗೆ ದಿಗ್ಬಂಧನ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದು ಕೊಂಡಿದ್ದಾರೆ ಕುರಿಗಾಹಿಗಳು. ಇಳಕಲ್ ಮೂಲದ 19ವರ್ಷದ ಕಿರಣ್ ಗೊಂದಳೆ,14ವರ್ಷದ ಗಣೇಶ್ ಗೊಂದಳೆ ಇಬ್ಬರು ಕುರಿ ಕಳ್ಳತನಕ್ಕೆ ಬಂದವರಾಗಿ ದ್ದಾರೆ.
ಇಬ್ಬರು ಕುರಿ ಕಳ್ಳರು ಅಪ್ರಾಪ್ತರಾದ ಹಿನ್ನೆಲೆಯಲ್ಲಿ
ಪೊಲೀಸ್ ಠಾಣೆಯಲ್ಲಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ ಪೊಲೀಸರು
ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.