SDM ನಲ್ಲಿ ಮತ್ತೆ 25 ಜನರಲ್ಲಿ ಪಾಸಿಟಿವ್ ಸೋಂಕು – ಸ್ವಲ್ಪ ಮಟ್ಟಿಗೆ ತಗ್ಗಿದ ಪ್ರಮಾಣ ನಿಟ್ಟುಸಿರು ಬಿಟ್ಟ ಜನತೆ…..

Suddi Sante Desk

ಧಾರವಾಡ –

ಎಸ್ ಡಿ ಎಂ ಕೋವಿಡ್ ಎಲ್ಲಾ ತಪಾಸಣೆಗಳು ಪೂರ್ಣ ಇಂದು 2217 ವ್ಯಕ್ತಿಗಳ ತಪಾಸಣೆಗಳಲ್ಲಿ 25 ಜನರಿಗೆ ಕೋವಿಡ್ ದೃಢ 306 ಕ್ಕೆ ಏರಿಕೆಯಾದ ಪಾಸಿಟಿವ್ ಸ್ವಲ್ಪ ಮಟ್ಟಿಗೆ ತಗ್ಗಿದ ಕರೋನ ನಿಟ್ಟುಸಿರು ಬಿಟ್ಟ ಅವಳಿ ನಗರದ ಜನತೆ

ಇಲ್ಲಿನ ಎಸ್ ಡಿ ಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೋವಿಡ್ ತಪಾಸಣೆಗೆ ಒಳಗಾಗಿದ್ದ 2217 ಜನರ ಕೋವಿಡ್ ತಪಾಸಣಾ ವರದಿಗಳುಲಭ್ಯವಾಗಿದ್ದು,ಇವರಲ್ಲಿ 25 ಜನರಿಗೆ ಮಾತ್ರ ಕೋವಿಡ್ ಸೋಂಕು ದೃಢವಾಗಿದೆ ಪಾಸಿಟಿವಿಟಿ ದರ ಶೇ.1.12 ರಷ್ಟಿದೆ ಎಂದು ಜಿಲ್ಲಾಧಿಕಾರಿಗ ಳಾದ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ತಪಾಸಣೆ ಮಾಡ ಲಾಗಿದ್ದ 1756 ಜನರಲ್ಲಿ 281 ಜನರಲ್ಲಿ ಸೋಂಕು ದೃಢ ಪಟ್ಟು ಪಾಸಿಟಿವಿಟಿ ದರ ಶೇ.16 ಕ್ಕೇರಿತ್ತು.ನಿನ್ನೆ ಮತ್ತು ಇಂದು ಸ್ವ್ಯಾಬ್ ಸಂಗ್ರಹಿಸಿದ್ದ 2217 ಜನರಲ್ಲಿ ಕೇವಲ 25 ವ್ಯಕ್ತಿಗಳಲ್ಲಿ ಮಾತ್ರ ಸೋಂಕು ಕಂಡು ಬಂದಿದೆ ಪಾಸಿಟಿವಿಟಿ ದರ ಶೇ.1.12 ಇದೆ. ಎಸ್ ಡಿ ಎಂ‌ ಆವರಣದ ವಿದ್ಯಾರ್ಥಿ ಗಳು,ವೈದ್ಯರು,ಸಿಬ್ಬಂದಿ, ರೋಗಿಗಳುಸಹಾಯಕರು ಸೇರಿ ಒಟ್ಟು 3973 ತಪಾಸಣೆಯಿಂದ 306 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಎಸ್ ಡಿ ಎಂ ಆವರಣದ ವಿದ್ಯಾರ್ಥಿಗಳು,ವೈದ್ಯರು ಹಾಗೂ ಸಿಬ್ಬಂದಿ ವರ್ಗದ ಕೆಲವರಲ್ಲಿಯೇ ಈ ಸೋಂಕು ಸೀಮಿತ ವಾಗಿದೆ.ರೋಗಿಗಳು,ಅವರ ಹಾರೈಕೆದಾರರಲ್ಲಿ ಈ ಸೋಂಕು ವ್ಯಾಪಿಸಿಲ್ಲ.ಜಿಲ್ಲಾಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸರು,ಎಸ್ ಡಿ ಎಂ ಆಡಳಿತ ಮಂಡಳಿ ಬಿಗಿಕ್ರಮಗಳನ್ನು ಮುಂದುವರೆಸಲಿವೆ ಎಂದು ಅವರು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.