ಚಿಕ್ಕಮಗಳೂರು –
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ASI ಸೇರಿ ಮೂವರು ಪೊಲೀಸ್ ಸಿಬ್ಬಂದಿ ಗಳನ್ನು ಅಮಾನತು ಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್ ಅಕ್ಷಯ್ ಆದೇಶಿಸಿದ್ದಾರೆ. ಸಖರಾಯ ಪಟ್ಟಣ ಪೊಲೀಸ್ ಠಾಣೆಯ ಎಎಸ್ಸೈ ಶಿವಕುಮಾರ್, ಪೊಲೀಸ್ ಪೇದೆಗಳಾದ ಶಿವಾಜಿ, ಶಿವು ಎಂಬುವರ ನ್ನು ಕರ್ತವ್ಯ ಲೋಪ ಎಸಗಿದ ಆರೋಪದಡಿಯಲ್ಲಿ ಅಮಾನತುಗೊಳಿಸಲಾಗಿದೆ.
ಇತ್ತೀಚೆಗೆ ಪೊಕ್ಸೊ ಕಾಯಿದೆಯಡಿಯಲ್ಲಿ ಬಂಧಿತ ನಾಗಿದ್ದ ಆರೋಪಿಯೊಬ್ಬ ಲಾಕಪ್‍ನಿಂದ ತಪ್ಪಿಸಿ ಕೊಂಡಿದ್ದು, ಅಂದು ಈ ಮೂವರು ಪೊಲೀಸರು ಕರ್ತವ್ಯದಲ್ಲಿದ್ದರು. ತಪ್ಪಿಸಿಕೊಂಡಿದ್ದ ಆರೋಪಿ ಯನ್ನು ಮತ್ತೆ ಬಂಧಿಸಲಾಗಿದೆಯಾದರೂ ಮೂವರು ಪೊಲೀಸರು ಅಂದು ಕರ್ತವ್ಯ ಲೋಪ ಎಸಗಿದ್ದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತುಗೊಳಿಸಿ ಎಸ್ಪಿ ಆದೇಶ ನೀಡಿದ್ದಾರೆ.