ಬೆಂಗಳೂರು –
ಸಿಡಿ ಲೇಡಿ ಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಮತ್ತೊಂದು ನೊಟೀಸ್ ಜಾರಿ ಮಾಡಿದ್ದಾರೆ. ಇತ್ತ ನಿನ್ನೆಯಷ್ಟೇ ಈ ಒಂದು ವಿಚಾರ ಕುರಿತು ನ್ಯಾಯಾಲಯಕ್ಕೆ ನೇರವಾಗಿ ಹಾಜರು ಮಾಡುವ ಕುರಿತು ಲೇಡಿ ಪರ ವಕೀಲರು ಅರ್ಜಿ ಹಾಕಿದ್ದರು ನ್ಯಾಯಾಲಯ ಕೂಡಾ ಅನುಮತಿ ನೀಡಿದೆ.ಇದರ ಬೆನ್ನಲ್ಲೇ ಈಗ ನ್ಯಾಯಾಲಯದ ಆದೇಶದಂತೆ ಯುವತಿಯನ್ನು ಹಾಜರುಪಡಿಸು ತ್ತೇವೆ ಎಂದು ಯುವತಿ ಪರ ವಕೀಲ ಜಗದೀಶ್ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಲು ಅನುಮತಿ ಸಿಕ್ಕಿದೆ ಎಂದರು.
ಸಿಡಿಯಲ್ಲಿ ಇದ್ದಾಳೆ ಎನ್ನಲಾದ ಯುವತಿ ನಿನ್ನೆ ನ್ಯಾಯಾಲಯದ ಮುಂದೆ ಹಾಜರಾಗುತ್ತಾಳೆ ಎಂಬ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಒಬ್ಬರು ಡಿಸಿಪಿ, ಇಬ್ಬರು ಎಸಿಪಿ , 10 ಮಂದಿ ಸಬ್ ಇನ್ಸ್ಪೆಕ್ಟರ್ ಗಳು ನೂರಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿ, ಮೂರು KSRP ತುಕಡಿಗಳ ನ್ನು ಬಂದೋ ಬಸ್ತ್ ಗಾಗಿ ನಿಯೋಜಿಸಲಾಗಿತ್ತು. ಪ್ರಕರಣದ ತನಿಖೆ ಹೈಕೋರ್ಟ್ ನ್ಯಾಯಮೂರ್ತಿ ಯವರ ನೇರ ಉಸ್ತುವಾರಿಯಲ್ಲಿ ನಡೆಯಬೇಕು ಮತ್ತು ರಾಜ್ಯ ಸರ್ಕಾರ ನನಗೆ ಸೂಕ್ತವಾದ ರಕ್ಷಣೆ ಒದಗಿಸಬೇಕು, ನಾನು ಅತ್ಯಾಚಾರದ ಸಂತ್ರಸ್ತೆ, ನಾನು ಮಾಜಿ ಸಚಿವರ ವಿರುದ್ಧ ಕಬ್ಬನ್‍ಪಾರ್ಕ್ ಠಾಣೆಗೆ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.
ಮಾಜಿ ಸಚಿವರು ಪ್ರಭಾವಿ ವ್ಯಕ್ತಿಯಾಗಿದ್ದು ಸಾರ್ವ ಜನಿಕವಾಗಿಯೇ ನನಗೆ ಬೆದರಿಕೆ ಹಾಕಿದ್ದಾರೆ. ಅವರ ಬೆಂಬಲಿಗರೂ ಕೂಡಾ ನನಗೆ ಬೆದರಿಕೆ ಹಾಕುತ್ತಿದ್ದಾ ರೆ. ನನಗೆ ಮತ್ತು ನನ್ನ ಕುಟುಂಬದವರಿಗೆ ಎಸ್‍ಐಟಿ ರಕ್ಷಣೆ ನೀಡುತ್ತಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿಲ್ಲ.
ನಾನು ನ್ಯಾಯಾಧೀಶರ ಮುಂದೆ ಹಾಜರಾಗುವು ದನ್ನು ತಡೆಯಲು ಮಾಜಿ ಸಚಿವರು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಬಳಕೆ ಮಾಡಿಕೊಳ್ಳುತ್ತಿ ದ್ದಾರೆ ಎಂಬ ಹಲವು ಅಂಶಗಳುಳ್ಳ ಪತ್ರವನ್ನು ಯುವತಿ ಮುಖ್ಯ ನ್ಯಾಯಾಧೀಶರಿಗೆ ಬರೆದು ಇಮೇಲ್ ಮೂಲಕ ರವಾನಿಸಿದ್ದರು.ಅವರ ವಕೀಲ ರಾದ ಜಗದೀಶ್ ಅವರು ಡೆಪ್ಯುಟಿ ರಿಜಿಸ್ಟ್ರ ರ್ ಅವರನ್ನು ಇಂದು ಭೇಟಿ ಮಾಡಿ ಅನುಮತಿಗಾಗಿ ಮನವಿ ಸಲ್ಲಿಸಿದ್ದು ಅನುಮತಿ ನೀಡಿದ್ದು ಇವೆಲ್ಲದರ ನಡುವೆ ಈಗ ಅನುಮತಿ ಸಿಕ್ಕಿದ್ದು ಹೀಗಾಗಿ ಇವತ್ತಾ ದರೂ ಆ ಸಿಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗ್ತರಾ ಎಂಬುದನ್ನು ಕಾದು ನೋಡಬೇಕು.