ದಾವಣಗೆರೆ –
ಬೆಳ್ಳಂ ಬೆಳಿಗ್ಗೆ ಎಸಿಬಿ ಬಲೆಗೆ BEO ಅಧಿಕಾರಿ ಯೊಬ್ಬರು ಬಿದ್ದಿದ್ದಾರೆ. ಹೌದು ದಾವಣಗೆರೆಯ ಜಗಳೂರು ಬಿಇಒ, ಶಿಕ್ಷಣ ಸಂಯೋಜಕ ವೆಂಕಟೇಶ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಬಿಇಒ ವೆಂಕಟೇಶ, ಶಿಕ್ಷಣ ಸಂಯೋಜಕ ಅಧಿಕಾರಿ ಮಂಜಪ್ಪ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿ ದ್ದಾರೆ.ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಬಿಇಒ ಕಚೇರಿಯಲ್ಲಿ ಎಸಿಬಿ ದಾಳಿಯಾಗಿದೆ.
ಶಿಕ್ಷಕನಿಂದ ಲಂಚದ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಶಿಕ್ಷಕ ಆಂಜನೇಯ ನಾಯ್ಕ ಎಂಬುವರಿಂದ ಹಣ ಪಡೆಯುತ್ತಿದ್ದ ಬಿಇಓ.ಶಿಕ್ಷಕ ಆಂಜನೇಯ ನಾಯ್ಕ ಅವರ ಬಳಿ ಸ್ಥಳ ನಿಯುಕ್ತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ Beo ಅಧಿಕಾರಿ.
25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಇಒ ವೆಂಕಟೇಶ್.ಬಿಇಒ ಕಚೇರಿಯಲ್ಲಿ 10 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ