ಹದಗೆಟ್ಟ ರಸ್ತೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಸ್ತೆ ಮಧ್ಯದಲ್ಲಿ ಹೋಮ – ರಸ್ತೆಯಲ್ಲಿ ಯೇ ವಿಶೇಷವಾಗಿ ಹೋಮ ಮಾಡಿ ಗಮನ ಸೆಳೆದ ಕೈ ಪಕ್ಷದವರು…..

Suddi Sante Desk

ಹುಬ್ಬಳ್ಳಿ –

ಗಣ ಹೋಮದ ಮೂಲಕ ರಾಷ್ಟ್ರೀಯ ಗಣ್ಯರ ಗಮನ ಸೆಳೆದ ಕಾಂಗ್ರೆಸ್: ರಸ್ತೆ ಮಧ್ಯದಲ್ಲಿ ಹೋಮ ಸರ್ಕಾರದ ವಿರುದ್ಧ ಆಕ್ರೋಶ…!

ಹೌದು ಹುಬ್ಬಳ್ಳಿ ಹೆಸರಿಗೆ ಮಾತ್ರ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ.ಈ ನಗರ ಸ್ಮಾರ್ಟ್ ಆಗುವುದು ಜನಪ್ರತಿನಿಧಿಗಳ ಮಕ್ಕಳ ಮದುವೆ ಹಾಗೂ ಆಡಳಿತಾ ರೂಢ ಪಕ್ಷದ ಏನಾದರೂ ಕಾರ್ಯಕ್ರಮ ಇದ್ದಾಗ ಮಾತ್ರ. ಉಳಿದ ದಿನಗಳಲ್ಲಿ ಇದರ ಪಾಡು ಹೇಳ ತೀರದು.ಈ ಎಲ್ಲ ವ್ಯವಸ್ಥೆಗೆ ಬೇಸತ್ತಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಣ್ಣು ತೆರೆಸಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಹೌದು.. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಸ್ಮಾರ್ಟ್ ಸಿಟಿ ಯೋಜನೆ ಮಾತ್ರವಲ್ಲದೆ ಯಾವುದೇ ಅನುದಾನ ಬಂದರೂ ಕೂಡ ಧೂಳು ಮುಕ್ತ, ಗುಂಡಿ ಮುಕ್ತ ಮಾಡಲು ಸಾಧ್ಯವಾಗುತ್ತಿಲ್ಲ.ಅಲ್ಲದೆ ಸರ್ಕಾರ ಹಾಗೂ ಸರ್ಕಾರ ಜನಪ್ರತಿನಿಧಿಗಳು ಮಾತ್ರ ಹರಕೆ ಉತ್ತರ ವನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ ವಿನಃ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಹದಗೆಟ್ಟ ಹುಬ್ಬಳ್ಳಿ-ಧಾರವಾಡ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ರಸ್ತೆ ಮಧ್ಯದಲ್ಲಿಯೇ ಗಣ ಹೋಮ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡಸಿದೆ.ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿ ಗಣಹೋಮ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪ ಡಿಸಿದರು.ಇಬ್ಬರು ಅರ್ಚಕರಿಂದ ಮಂತ್ರ ಘೋಷ ಪಟಣ ಮಾಡಿ ಶಾಸ್ತ್ರೋಕ್ತವಾಗಿ ಗಣಹೋಮ ನೆರವೆರಸಿದ ಕಾಂಗ್ರೆಸ್ ಕಾರ್ಯಕರ್ತರು,ಕಳೆದು ಎರಡೂ ವರ್ಷದಿಂದ ಹದಗೆಟ್ಟ ಹುಬ್ಬಳ್ಳಿ-ಧಾರವಾಡ ರಸ್ತೆಗಳನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿದರು.ನಾಳೆ ಬಿಜೆಪಿ ಕಾರ್ಯಕಾ ರಣಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ದಂತೆ ಹಲವು ಗಣ್ಯಾತಿಗಣ್ಯರು ಭಾಗಿಯಾಗುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರ ಗಮನ ಸೆಳೆಯಲು ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಒಟ್ಟಿನಲ್ಲಿ ಕಾಂಗ್ರೆಸ್ ಒಂದಿಲ್ಲೊಂದು ರೀತಿಯಲ್ಲಿ ಪ್ರತಿಭಟ ನೆ ಮಾಡುವ ಮೂಲಕ ಸರ್ಕಾರದ ಹಾಗೂ ಜನಪ್ರತಿನಿ ಧಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದೆ.ಆದರೆ ನಮ್ಮ ಸರ್ಕಾರಕ್ಕೆ ಮಾತ್ರ ಅವಳಿನಗರದ ಜನರ ಸಮಸ್ಯೆ ಮಾತ್ರ ಕಾಣದೇ ಇರುವುದು ದುರದೃಷ್ಟಕರ ಸಂಗತಿಯಾ ಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.