ಬೆಂಗಳೂರು –
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಳೆದ ಹಲವು ದಿನಗಳಿಂದ ಕಾಡುತ್ತಿದ್ದ ಸಿಡಿ ಲೇಡಿ ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವಿಡಿಯೋ ಮೂಲಕ ಪ್ರತ್ಯಕ್ಷಳಾಗುತ್ತಿದ್ದ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.ತನಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದ ಲೇಡಿ ಸಿಡಿ ಬಿಡುಗಡೆಯಾಗಿ 28 ದಿನಗಳ ನಂತರ ಪ್ರತ್ಯಕ್ಷವಾಗಿದ್ದಾಳೆ.
ಸಿಆರ್‌ಪಿಸಿ 164 ಹೇಳಿಕೆ ದಾಖಲು ಮಾಡಿಸಲು ನ್ಯಾಯಾಲಯಕ್ಕೆ ಲೇಡಿ ಮಧ್ಯಾಹ್ನ 3 ಘಂಟೆಗೆ ಬಂದಿದ್ದು ಕೂಡಲೇ ಯುವತಿಯನ್ನು ನ್ಯಾಯವಾದಿ ಗಳು ಟೈಪಿಸ್ಟ್ ನೊಂದಿಗೆ ಅಜ್ಞಾತ ಸ್ಥಳಕ್ಕೆ ಕರೆದು ಕೊಂಡು ಹೋದರು.ಎರಡು ಕ್ಯಾಮೆರಾ ಗಳಲ್ಲಿ ಯುವತಿಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊ ಳ್ಳುತ್ತಾ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಇನ್ನೂ ಪ್ರಮುಖವಾಗಿ ಗೌಪ್ಯತೆ ಕಾಪಾಡಬೇಕಿದ್ದ ಕಾರಣ ಯಾರಿಗೂ ಗೊತ್ತಾಗದ ಹಾಗೆ ಕರೆದು ಕೊಂಡು ಬಂದಿದ್ದೇವೆ ಎಂದು ಜಗದೀಶ್ ಹೇಳಿದ್ದಾ ರೆ.ಎಸ್‌ಐಟಿ ಅಧಿಕಾರಿಗಳು ಹೆಚ್ಚಿನ ವಿಚಾರಣೆ ಅಗತ್ಯ ಇದೆ ಎಂದು ಇವರು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.ಹೀಗಾಗಿ ಯುವತಿಯ ನ್ನು ಅಂತಿಮವಾಗಿ ಯಾರು ಕರೆದುಕೊಂಡು ಹೋಗುತ್ತಾರೆಯೋ ಎಂಬುದನ್ನು ನೋಡಬೇಕು
ನೃಪತುಂಗ ರಸ್ತೆಯಲ್ಲಿ ಇರುವ ನ್ಯಾಯಾಲಯದ ಆವರಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು ನ್ಯಾಯಾ ಲಯದ ಪ್ರೊಸಿಡಿಂಗ್ಸ್ ಮುಗಿದ ಮೇಲೆ ವಿವರ ನೀಡುತ್ತೇವೆ ಎಂದು ಯುವತಿ ಪರ ನ್ಯಾಯವಾದಿ ಜಗದೀಶ್ ಹೇಳಿದರು. ಈ ರೀತಿಯ ಪ್ರಕರಣದಲ್ಲಿ ಮಹಿಳೆ ನೀಡುವ ಹೇಳಿಕೆ ಮುಖ್ಯವಾಗುತ್ತದೆ ಎಂದರು