ACB ಬಲೆಗೆ ಬಿದ್ದ ಪ್ರಾಚಾರ್ಯ ಸಿಪಾಯಿ – ಪರೀಕ್ಷೆ ಪಾಸ್ ಮಾಡಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದವರು ಬಿದ್ದರು ಬಲೆಗೆ…..

Suddi Sante Desk

ಬೆಳಗಾವಿ –

ಐಟಿಐ ಕೋರ್ಸ್‌ನ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಸ್ ಮಾಡಲು ಲಂಚ ಪಡೆಯುತ್ತಿದ್ದ ITI ಕಾಲೇಜಿನ ಪ್ರಾಚಾರ್ಯ ಮತ್ತು ಸಿಪಾಯಿ ಯೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಲ್ಲಿ ನಡೆದಿದೆ.

ಹೌದು ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶು ಪಾಲ ಮತ್ತು ಅಲ್ಲಿನ ಸಿಪಾಯಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.ಪರೀಕ್ಷಾ ಕೇಂದ್ರದ ಮುಖ್ಯಸ್ಥರೂ ಆಗಿದ್ದ ರಾಮನಗೌಡ ಬಾಬಾಗೌಡ ಪಾಟೀಲ ಮತ್ತು ಬಸವರಾಜ ರಾಮಪ್ಪ ಮೋಹಿತೆ ಬಲೆಗೆ ಬಿದ್ದವರಾಗಿದ್ದಾರೆ

ರಾಮದುರ್ಗ ತಾಲ್ಲೂಕಿನ ತುರನೂರ ವಿಶ್ವಚೇತನ ಐಟಿಐ ಕಾಲೇಜಿನ ಸುಧೀರ ಸಿದ್ದನಕೊಳ್ಳ ಅವರು ದೂರು ನೀಡಿ ದ್ದರು.ದ್ವಿತೀಯ ವರ್ಷದ 14 ಪರೀಕ್ಷಾರ್ಥಿಗಳನ್ನು ಪಾಸ್ ಮಾಡಲು ಆರೋಪಿಗಳು ₹ 14 ಸಾವಿರ ಲಂಚ ಪಡೆಯು ವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಬಿ (ಉತ್ತರ ವಲಯ) ಎಸ್ಪಿ ಬಿ.ಎಸ್ ನ್ಯಾಮಗೌಡರ ಮಾರ್ಗದರ್ಶನ ಹಾಗೂ ಪ್ರಭಾರ ಡಿವೈಎಸ್ಪಿ ಮಹಾಂತೇ ಶ್ವರ ಜಿದ್ದಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ ಹಾಗೂ ಸುನೀಲಕುಮಾರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.