ವಿಜಯಪುರ –
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆ ಸಿ.ಡಿ. ಪ್ರಕರಣ ಸಂಬಂಧ ನಮ್ಮ ಬಳಿ ಇನ್ನೂ 9 ಸಾಕ್ಷ್ಯ ಇವೆ. ಅವೆಲ್ಲಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮುಳುವಾಗಲಿವೆ ಎಂದು ಯುವತಿಯ ಸಹೋದರ ಹೇಳಿಕೆ ನೀಡಿದ್ದಾರೆ.
ವಿಜಯ ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದ ನನ್ನ ಸಹೋದರಿ ಮೇಲೆ ಡಿ.ಕೆ. ಶಿವಕುಮಾರ್ ಒತ್ತಡ ಇದೆ. ಇದನ್ನು ನಾನು ದಾಖಲೆ ಸಮೇತ ಸಾಬೀತುಪಡಿಸುವೆ ಎಂದರು.
ಸಮಗ್ರವಾಗಿ ತನಿಖೆಯಾದರೆ ಎಲ್ಲ ವಿಷಯಗಳು ಹೊರಬರುತ್ತವೆ. ಸತ್ಯವನ್ನು ಮುಚ್ಚಿಡಲು ಸಾಧ್ಯ ವಿಲ್ಲ. ಇಂದಲ್ಲ ನಾಳೆ ಡಿ.ಕೆ. ಶಿವಕುಮಾರ್ ಹೆಸರು ಹೊರಗೆ ಬಂದೇ ಬರುತ್ತದೆ ಎಂದರು
ಈಗಾಗಲೇ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಳು ನಡೆಯುತ್ತಿದೆ.ಸೀಡಿ ಲೇಡಿ ಎಸ್ಐಟಿ ತನಿಖೆ ನಡೆಸುತ್ತಿದ್ದು ಪೋಷಕರ ವಿರುದ್ಧ ವೂ ಆಕೆ ಅಸಮಾಧಾನಗೊಂಡಿದ್ದಾಳೆ. ಇತ್ತ ಆಕೆಯ ಕುಟುಂಬ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಗಳನ್ನು ಮುಂದುವರಿಸಿದ್ದು ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು