ಕೋಲಾರ –
ಶಾಲಾ ಸಮಯಕ್ಕೆ ತಕ್ಕಂತೆ ಬಸ್ ಬಿಡುವಂತೆ ಶಿಕ್ಷಕರಿಂದ ಒತ್ತಾಯ ಕೇಳಿ ಬಂದಿದೆ. ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ರಾಜ್ಯ ಘಟಕ ಹುಬ್ಬಳ್ಳಿ, ಮಾಲೂರು ತಾಲ್ಲೂಕು ಘಟಕದ ವತಿಯಿಂದ ಮಾಲೂರು ತಾಲ್ಲೂಕಿನ ಶಾಸಕರಾದ ಕೆ.ವೈ ನಂಜೇಗೌಡರಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಾಲಾ ಸಮಯಕ್ಕೆ ಸರ್ಕಾರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲು ಮನವಿ ಸಲ್ಲಿಸಲಾಯಿತು.

ಅಧ್ಯಕ್ಷರಾದ ಟಿ.ವೆಂಕಟೇಶ ಗೌಡ ಪ್ರಧಾನ ಕಾರ್ಯ ದರ್ಶಿ ವಿ ಸಂಜೀವಪ್ಪ, ಜಿಲ್ಲಾ ಉಪಾಧ್ಯಕ್ಷ ರಾದ ಶಶಿಧರ್, ಸಂಘಟನಾ ಕಾರ್ಯದರ್ಶಿಗಳಾದ ಎನ್ ವಿ ಅಶೋಕ ,ಉಪಾಧ್ಯಕ್ಷ ಮಂಜುನಾಥ್, ಮುಖಂ ಡರಾದ ಸಂಪಂಗಿ.ಎಂ ಹಾಗೂ ಗ್ರಾಮೀಣ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಈ ಒಂದು ಮನವಿ ಅರ್ಪಿಸುವ ಸಮಯದಲ್ಲಿ ಉಪಸ್ಥಿ ತರಿದ್ದರು.ಬೇಡಿಕೆಯನ್ನು ಆದಷ್ಟು ಬೇಗ ನೆರವೇರಿಸ ಲು ಕ್ರಮ ವಹಿಸುವುದಾಗಿ ಶಾಸಕರು ಗ್ರಾಮೀಣ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದರು