ಬೀದರ್ –
ಹೇಳದೇ ಕೇಳದೇ ಕಾಮಗಾರಿ ಆರಂಭಿಸೊಕೆ ನಿನೇನು ನಿಮ್ಮಪ್ಪನ ರಾಜ್ಯದಲ್ಲಿ ಇದ್ದಿಯಾ. ಹೀಗೆಂದು ರಾಜ್ಯ ಸರ್ಕಾರದ ಸಚಿವರೊಬ್ಬರು ಹೇಳಿದ್ದಾರೆ. ಹೌದು ಪವರ್ ಪ್ಲಾಂಟ್ ಕಾಮಗಾರಿ ವಿಚಾರದಲ್ಲಿ ಸಚಿವರನ್ನು ಕೇಳದೆ ಗುತ್ತಿಗೆದಾರನೊಬ್ಬ ಕಾಮಗಾರಿ ಆರಂಭ ಮಾಡಿದ್ದಾರೆ. ಗಮನಕ್ಕೆ ತರಲಾರದೇ ಕಾಮಗಾರಿ ಆರಂಭ ಮಾಡಿದಕ್ಕೆ ಸಚಿವ ಪ್ರಭು ಚೌಹಾನ್ ಜೇಸ್ಕಾಂ ಗುತ್ತಿಗೆದಾರನ ವಿರುದ್ಧ ಕಿಡಿಕಾರಿದ್ದಾರೆ.
ಜೇಸ್ಕಾಂ ಪವರ್ ಸ್ಟೇಷನ್ ಗುತ್ತಿಗೆದಾರನ ವಿರುದ್ಧ ಸಚಿವರು ರಾಂಗ್ ರಾಂಗ್ ಆಗಿ ಮಾತುಗಳನ್ನು ಆಡಿದ್ದಾರೆ. ಲೇಬರ್ ಕಾಂಟ್ರ್ಯಾಕ್ಟರ್ ರಮೇಶ್ ಮೇಲೆ ಈ ಒಂದು ದರ್ಪವನ್ನು ತೋರಿಸಿದ ಸಚಿವರು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೆಲಸ ಮಂಜೂರು ಮಾಡಿದ್ದವರು ನಾವು.ದುಂಬಾಲು ಬಿದ್ದು ಸರ್ಕಾರದಲ್ಲಿ ಕೆಲಸ ಮಂಜೂರು ಮಾಡಿದ್ದೇವೆ. ನೀನು ನನಗೆ ಹೇಳದೇ ಕೇಳದೇ ಕೆಲಸ ಆರಂಭಿಸಿದರೇ ನನ್ನ ಹೆಸರು ಹೇಗೆ ಆಗಬೇಕು.ನಮ್ಮ ಗಮನಕ್ಕೆ ತಂದು ಕೆಲಸ ಆರಂಭಿಸಬೇಕು.ಯಾರು ಆಫೀಸರು, ಯಾರು ಗುತ್ತಿಗೆದಾರ ಎಂದು ಸಚಿವರು ಬಹಿರಂಗವಾಗಿ ಮಾತನಾಡಿದ್ದಾರೆ. ಯನಗುಂದಾ ಬಳಿ ಪವರ್ ಪ್ಲ್ಯಾಂಟ್ ಗೆ ಭೇಟಿ ವೇಳೆ ಸಚಿವರು ದರ್ಪವನ್ನು ತೋರಿದ್ದಾರೆ.ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಬಳಿ ಈ ಒಂದು ಘಟನೆ ನಡೆದಿದೆ. ಕಾಮಗಾರಿ ಆರಂಭಿಸಿದ ಅಧಿಕಾರಿಗೆ ಸಚಿವ ಪ್ರಭು ಚೌಹಾನ್ ಬಹಿರಂಗವಾಗಿ ಆವಾಜ್ ಹಾಕಿರುವ ವಿಡಿಯೋ ಈಗ ವೈರಲ್ ಆಗಿದ್ದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಬಾಯಿಯಲ್ಲಿ ಎಂಥ ಮಾತು ಎಂದು ಬೀದರ್ ಜಿಲ್ಲೆಯ ಜನರು ಈಗ ಮಾತನಾಡಿಕೊಳ್ಳುತ್ತಿದ್ದಾರೆ.