ಶಿಕ್ಷಕಿ ನಿಧನ – ಸುನೀತಾ ಮೊರಬ ಶಿಕ್ಷಕಿ ಸಾವಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳಿಂದ ಭಾವಪೂರ್ಣ ನಮನ ಸಂತಾಪ…..

Suddi Sante Desk

ಬೆಳಗಾವಿ –

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಧನೆ ಮಾಡಿ ಇಲಾಖೆಗೆ ಮತ್ತು ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿದ್ದ ಬೆಳಗಾವಿ ಮಹಾನಗರ ಸರ್ಕಾರಿ ಪ್ರಾಥ ಮಿಕ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘ ನಂಬರ್ 2 ಬೆಳಗಾವಿ ಸದಸ್ಯರಾದ ಕು ಸುನಿತಾ ಮೊರಬ ಅವರೇ ಮೃತರಾದ ಶಿಕ್ಷಕಿ ಯಾಗಿದ್ದಾರೆ.

ವೈಭವ ನಗರ ಶಾಲೆಯ ಶಿಕ್ಷಕಿಯರಾಗಿದ್ದು ಅಕಾಲಿಕವಾಗಿ ಮರಣ ಹೊಂದಿದ್ದಾರೆ.ಇವರ ನಿಧನಕ್ಕೆ ಸಂಘದ ಅಧ್ಯಕ್ಷ ರಾದ ಐ ಬಿ ಘಟ್ಟದ ಮಾಜಿ ಅಧ್ಯಕ್ಷರಾದ ರೋಗಿ, ನಿರ್ದೇಶ ಕರಾದ,ಶಂಕರ ಮುನ್ನೊಳ್ಳಿ ಹಾಗೂ ಕಾರ್ಯದರ್ಶಿಗಳು ಸೇರಿದಂತೆ ಹಲವರು ಶಿಕ್ಷಕಿಯವರ ನಿವಾಸಕ್ಕೆ ಭೇಟಿ ಕೊಟ್ಟು ಸಂಘದ ಪರವಾಗಿ ಸಂತಾಪ ಸೂಚಿಸಿದ್ದಾರೆ ಹಾಗೇ ಮರಣೋತ್ತರ ನಿಧಿ 5000 ರೂಪಾಯಿಗಳನ್ನು ಸಲ್ಲಿಸಿದ್ದು ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದು ಇವರೊಂದಿಗೆ ನಾಡಿನ ಮೂಲೆ ಮೂಲೆ ಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.