ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ ಹೊಸ ಜವಾಬ್ದಾರಿ ಕೆಲಸ ನೋಡಿದರೆ ಗಾಬರಿಯಾಗತೀರಾ

Suddi Sante Desk

ಬಿಹಾರ –

ಸಾಮಾನ್ಯವಾಗಿ ಶಾಲೆಯಲ್ಲಿ ಪಾಠ ಮಾಡೋದು, ಬಿಸಿ ಯೂಟದ ಜವಾಬ್ದಾರಿ,ಚುನಾವಣೆ ಕರ್ತವ್ಯ ಸೇರಿದಂತೆ ಹತ್ತಾರು ಡ್ಯೂಟಿಗಳನ್ನು ಮಾಡೋದನ್ನು ನೋಡಿದ್ದೇವೆ ಕೇಳಿದ್ದೇವೆ ಇದರ ನಡುವೆ ಬಿಹಾರ ದಲ್ಲಿ ಶಿಕ್ಷಕರಿಗೆ ಈಗ ಹೊಸ ಜವಾಬ್ದಾರಿ ಯನ್ನು ಸರ್ಕಾರ ನೀಡಿದೆ ಹೌದು ಈಗಾಗಲೇ ಕರ್ತವ್ಯ ನಿರತರಾಗಿರುವ ಸರ್ಕಾರಿ ಶಾಲಾ ಶಿಕ್ಷಕರಿಗೆ ಬಿಹಾರ ಸರ್ಕಾರ ಹೊಸ ಜವಾಬ್ದಾರಿಯೊಂದನ್ನು ಹೆಗಲ ಮೇಲೆ ಇಟ್ಟಿದೆ.

ಹೌದು ಏಪ್ರಿಲ್ 2016ರಿಂದಲೂ ರಾಜ್ಯದಲ್ಲಿ ಮದ್ಯಪಾನ ನಿಷೇಧವಾಗಿರುವ ಹಿನ್ನೆಲೆಯಲ್ಲಿ, ಹೆಂಡದ ಸೇವನೆ ಹಾಗೂ ಪೂರೈಕೆಯಲ್ಲಿ ಭಾಗಿಯಾದವರು ಯಾರಾದರೂ ಕಣ್ಣಿಗೆ ಬಿದ್ದರೆ ವರದಿ ಮಾಡುವಂತೆ ಶಿಕ್ಷಕರನ್ನು ನಿತೀಶ್ ಕುಮಾರ್‌ ಸರ್ಕಾರ ಸೂಚಿಸಿದೆ.ರಾಜ್ಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಂಜಯ್ ಕುಮಾರ್‌ ಎಲ್ಲ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಖುದ್ದು ಬರೆದಿರುವ ಪತ್ರದಲ್ಲಿ, ಸರ್ಕಾರದ ಪ್ರಾಥಮಿಕ, ಮಧ್ಯಮ ಹಾಗೂ ಪ್ರೌಢಶಾಲೆಗಳ ಪ್ರಾಂಶು ಪಾಲರು ಹಾಗೂ ಶಿಕ್ಷಕರಿಗೆ, ಮದ್ಯಪಾನ ಹಾಗೂ ಸಾಗಾ ಟದಲ್ಲಿ ಭಾಗಿಯಾಗಿರುವ ಮಂದಿಯನ್ನು ಪತ್ತೆ ಮಾಡಿ ಅಬಕಾರಿ ಇಲಾಖೆಗೆ ತಿಳಿಸುವಂತೆ ಸೂಚಿಸಲು ಹೇಳಲಾ ಗಿದೆ.ಈ ಸಂಬಂಧ ದೂರವಾಣಿ ಸಂಖ್ಯೆಗಳಾದ 9473400378 ಮತ್ತು 9473400606 ಅಥವಾ ಟೋಲ್ ಫ್ರೀ ಶುಲ್ಕಗಳಾದ 18003456268 ಅಥವಾ 15545ಗೆ ಕರೆ ಮಾಡಲು ಸೂಚಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.