ಬೆಂಗಳೂರು –
ಕರೋನಾ ಎಂಬ ಮಹಾಮಾರಿಯ ಕಾರಣದಿಂದ ವಿಕಲಚೇತನ ನೌಕರರಿಗೆ ಜಾರಿಗೆ ಮಾಡಿರುವ ಮನೆಯಿಂದಲೇ ಕೆಲಸ ಎಂಬ ಆದೇಶವು ಶಿಕ್ಷಕರಿ ಗೂ ಅನ್ವಯವಾಗಲಿದೆ ಎಂದು ವಿಕಲಚೇತ ನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.ವಿಕಲಚೇತನ ಶಿಕ್ಷಕರು ಶಾಲೆಯ ಮುಖ್ಯೋಪಾಧ್ಯಾಯರಿಗೆ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೌಲಭ್ಯದ ಕುರಿತು ಅರ್ಜಿಯನ್ನು ನೀಡಿ ಸೌಲಭ್ಯವನ್ನು ಪಡೆದು ಕೊಳ್ಳಬಹುದು. ಸೌಲಭ್ಯವನ್ನು ನೀಡಲು ನಿರಾಕರಿ ಸುವ ಅಧಿಕಾರಿಗಳ ವಿರುದ್ಧ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡುವುದರೊಂದಿಗೆ ಅಂತವರ ವಿರುದ್ಧ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಕರೋನಾ ಎಂಬ ಮಹಾಮಾರಿಯಿಂದ ವಿಕಲಚೇತ ನ ನೌಕರರು ಕಚೇರಿ ಅಥವಾ ಶಾಲೆಗೆ ಹಾಜರಾಗಲು ಆಗುತ್ತಿರುವ ತೊಂದರೆಗಳನ್ನು ಗಮನಿಸಿ ಸರಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ಅವರು 5 ನೇ ಫೆಬ್ರವರಿ 2021ರಂದು ಆದೇಶ ಮಾಡಿ ಎಲ್ಲಾ ತರಹದ ವಿಕಲಚೇತನ ನೌಕರರಿಗೆ ಅನ್ವಯವಾಗುತ್ತ ದೆ ಎಂಬ ಅಂಶವನ್ನು ಅಳವಡಿಸಿದರೂ ಕೂಡಾ ಶಿಕ್ಷಣ ಇಲಾಖೆಯಲ್ಲಿ ಮಾತ್ರ ವಿಕಲಚೇತನ ಶಿಕ್ಷಕರಿಗೆ ನೀಡಬೇಕಾದ ಮನೆಯಿಂದಲೇ ಕೆಲಸದ ಆದೇಶ ನಮಗೆ ಅನ್ವಯವಾಗುವುದಿಲ್ಲ ಎಂದು ಹೇಳುತ್ತಿರು ವುದು ವಿಕಲಚೇತನ ನೌಕರರಲ್ಲಿ ಗೊಂದಲವನ್ನು ಉಂಟು ಮಾಡಿದ್ದಾರೆ.ಸರಕಾರದ ಮುಖ್ಯ ಕಾರ್ಯ ದರ್ಶಿ ಮಾಡುವ ಆದೇಶವು ಎಲ್ಲಾ ಇಲಾಖೆಗೆ ಅನ್ವಯವಾಗುತ್ತದೆ ಎಂದರು