ಬೆಂಗಳೂರು –
ಅದ್ಯಾಕೋ ಏನೋ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ವಿಚಾರ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ವರ್ಗಾವಣೆ ವಿಚಾರ ಕುರಿತು ಶಿಕ್ಷಕರು ಏನೇ ಹೇಳಿ ದರು ಎಷ್ಟೇ ಕೇಳಿದರು ರಾಜ್ಯ ಸರ್ಕಾರ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ವರ್ಗಾವಣೆ ಕುರಿತು ತಾವು ಅನುಭವಿಸುತ್ತಿರುವ ನೋವು ಸಮಸ್ಯೆ ಸಂಕಷ್ಟ ಗಳ ಕುರಿತು ಶಿಕ್ಷಕರು ಎಷ್ಟೋ ಮನವಿ ಮಾಡಿದರು ಯಾರು ಮಾತ್ರ ಕಣ್ತೇರೆದು ನೋಡುತ್ತಿಲ್ಲ ಇನ್ನೂ ಇದರಿಂದ ಬೇಸತ್ತ ಶಿಕ್ಷಕರು ಮೂರು ದಿನಗಳಿಂದ ಈ ಒಂದು ಸಮಸ್ಯೆ ಕುರಿತು ಮಾನ್ಯ ಪ್ರಧಾನ ಮಂತ್ರಿ ಅವರಿಗೆ ಮೇಲ್ ಮಾಡಿ ಸಮಸ್ಯೆಯನ್ನು ಗಮನಕ್ಕೆ ತರುತ್ತಿದ್ದು ಈಗ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟ್ವಿಟರ್ ನಲ್ಲಿ ವರ್ಗಾವಣೆ ಕುರಿತು ಸಂದೇಶ ಕಳಿಸಿದ್ದಾರೆ.

ಹೌದು ರಾಜ್ಯದಲ್ಲಿ ಕೋವಿಡ್ ವಿಚಾರ ಕುರಿತು ಕೈಗೊಂಡ ಸಿದ್ದತೆ ಮತ್ತು ಕ್ರಮಗಳ ಕುರಿತು ಟ್ವೀಟ್ ಮಾಡಿದ್ದು ಇದರ ಸಂದೇಶದ ಕೆಳಗಡೆ ಶಿಕ್ಷಕ ರಾಘವೇಂದ್ರ ಅವರು ವರ್ಗಾವಣೆ ಕುರಿತು ಸಂದೇಶ ಟ್ವೀಟ್ ಮಾಡಿದ್ದಾರೆ.

ವರ್ಗಾವಣೆ ತಕ್ಷಣ ಪ್ರಾರಂಭಿಸಿ ನಮ್ಮ ನೋವಿಗೆ ಸ್ಪಂದಿಸಿ ಎಂದಿದ್ದು ಇನ್ನಾದರೂ ಈ ಒಂದು ನೋವಿ ಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು