ಚಿತ್ರದುರ್ಗ –
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿಗೆ ಕೊರೊನಾ ಸೊಂಕು ಕಾಣಿಸಿ ಕೊಂಡಿದೆ. ಹೌದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರಿಗೆ ಕೋರೋನಾ ಸೋಂಕು ದೃಢವಾಗಿದ್ದು ಸಧ್ಯ ಆಸ್ಪತ್ರೆ ಗೆ ದಾಖಲಾಗಿದ್ದಾರೆ.
ಕಳೆದ ಒಂದು ವಾರದ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು ಶಾಸಕ ತಿಪ್ಪಾರೆಡ್ಡಿ ಅವರು. ಲಸಿಕೆ ಪಡೆದುಕೊಂಡ ನಂತರ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದರು.
ಬಿಜೆಪಿ ಸ್ಥಳೀಯ ಶಾಸಕರು ಜಿ.ಹೆಚ್ ತಿಪ್ಪಾರೆಡ್ಡಿ ಅವರಿಗೆ ಕಳೆದ ಎರಡು ದಿನಗಳ ಹಿಂದೆ ಕಾಣಿಸಿ ಕೊಂಡಿದೆ ಕೊರೊನಾ ಸೋಂಕು.ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಶಾಸಕ ತಿಪ್ಪಾರೆಡ್ಡಿ ಅವರು.ಬೆಂಗಳೂರಿನ ಮಣಿಪಾಲ ಆಸ್ಪ ತ್ರೆಗೆ ಸಧ್ಯ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ