ಧಾರವಾಡದ ಮೊರಬ ಗ್ರಾಮದಲ್ಲಿ ಮಾವ ನಿಂದ ಅಳಿಯನ ಕೊಲೆ ಕತ್ತು ಸೀಳಿ ಕೊಲೆ ಮಾಡಿದ ಲಿಂಬಣ್ಣ…..

Suddi Sante Desk

ಧಾರವಾಡ –

ಮಾವನಿಂದ ಅಳಿಯನೊಬ್ಬನ ಕೊಲೆಯಾದ ಘಟನೆ ಧಾರವಾಡದ ಮೊರಬ ಗ್ರಾಮದಲ್ಲಿ ನಡೆದಿದೆ‌. ಹೌದು ಮನೆಯ ಮುಂದೆ ಮಲಗಿದ ವ್ಯಕ್ತಿಯ ಕತ್ತನ್ನು ಸೀಳಿ ಬರ್ಭರವಾಗಿ ಹತ್ಯೆಯನ್ನು ಮಾಡಲಾಗಿದೆ


ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಗ್ರಾಮದ ರಮೇಶ ಯರಗಣ್ಣನವರ (45) ಕೊಲೆಯಾದ ವ್ಯಕ್ತಿಯಾಗಿದ್ದು ಮಾವ ಲಿಂಬಣ್ಣ ಮೂಗನೂರನಿಂದಲೇ ಈ ಒಂದು ಕೃತ್ಯ ನಡೆದಿದೆ
ನಿರಂತರವಾಗಿ ಕಿರುಕುಳವನ್ನು ಕೊಡುತ್ತಿದ್ದನಂತೆ ರಮೇಶ
ಕಿರುಕುಳ ತಾಳದೇ ಹತ್ಯೆ ಮಾಡಿದ್ದಾರೆಂದು ಪೊಲೀಸರು ಹೇಳಿದ್ದು ಹರಿತವಾದ ಆಯುಧ ದಿಂದ ಕುತ್ತಿಗೆ ಸೀಳಿದ್ದು ಮಲಗಿದಲ್ಲಿಯೇ ಮೃತಪಟ್ಟಿದ್ದಾರೆ ರಮೇಶ ಇನ್ನೂ ಸುದ್ದಿ ತಿಳಿದ ನವಲಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.