ಬೆಂಗಳೂರು –
2021-22ನೇ ಸಾಲಿಗೆ ಹೊಸದಾಗಿ ಶಾಲೆಗಳಿಗೆ ಪ್ರವೇಶ ಪಡೆದಂತ ವಿದ್ಯಾರ್ಥಿಗಳಿಗೆ ದಾಖಲಾತಿ ಗಳಲ್ಲಿ, ಕುಟುಂಬದ ಗುರುತಿನ ಸಂಖ್ಯೆ ದಾಖಲಿ ಸುವುದು ಕಡ್ಡಾಯವಾಗಿದೆ. ಹೀಗೆ ವಿದ್ಯಾರ್ಥಿಗಳು ನೀಡುವ ಮಾಹಿತಿಯನ್ನು SATS ತಂತ್ರಾಂಶದಲ್ಲಿ ಅಳವಡಿಸೋದು ಕಡ್ಡಾಯವಾಗಿದೆ.ಹೀಗಾಗಿ ವಿದ್ಯಾರ್ಥಿಗಳು ಕೂಡಲೇ ನಿಮ್ಮ ಕುಟುಂಬದ ಗುರುತಿನ(ಪಡಿತರ ಚೀಟಿ) ಯನ್ನು ನೀಡುವಂತೆ ಮತ್ತು ತಗೆದುಕೊಳ್ಳುಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಮಾಡಿದ್ದಾರೆ

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಸರ್ಕಾರದ ಸೇವೆ/ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಕರ್ನಾಟಕ ರಾಜ್ಯ ನಿವಾಸಿ ಅರ್ಜಿದಾರರಿಂದ ಕುಟುಂಬದ ಗುರಿತಿನ(ಪಡಿತರ ಚೀಟಿ) ಸಂಖ್ಯೆ ಕಡ್ಡಾಯವಾಗಿದೆ ಪಡೆಯುವಂತೆ ತಿಳಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಾರ್ವಜ ನಿಕ ಶಿಕ್ಷಣ ಇಲಾಖೆ, ವಿದ್ಯಾರ್ಥಿ ಟ್ರಾಕಿಂಗ್ ವ್ಯವಸ್ಥೆ (SATS) ತಂತ್ರಾಂಶದಲ್ಲಿ ಕುಟುಂಬದ ಗುರುತಿನ ಸಂಖ್ಯೆ ಸೆರೆಹಿಡಿಯಲು ಇಲಾಖೆಯ SATS ಯೋಜನೆಯನ್ನು ಅಧಿಸೂಚಿಸಲಾಗಿದೆ.ಹೀಗಾಗಿ 2021-22 ನೇ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿರು ವಂತ ವಿದ್ಯಾರ್ಥಿಗಳು, ಕುಟುಂಬ ಗುರುತಿನ ಸಂಖ್ಯೆ ಇದ್ದಲ್ಲಿ, ನಮೂದಿಸಲು ಸೂಚಿಸಿ ಸುತ್ತೋಲೆ ಹೊರಡಿಸಿದ್ದಾರೆ