ಬೆಂಗಳೂರು –
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮಹಾ ಮಾರಿ ಹೆಚ್ಚಾಗುತ್ತಿದೆ. ಇಂಥಹ ಪರಿಸ್ಥಿತಿಯಲ್ಲಿ ಶಿಕ್ಷಕರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಹೀಗಾಗಿ ಕೂಡಲೇ ಬೇಸಿಗೆ ರಜೆಯನ್ನು ನೀಡು ವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಣ ಸಚಿವರಿಗೆ ಒತ್ತಾಯಿಸಿದೆ

ಈ ಕುರಿತು ರಾಜ್ಯ ಶಿಕ್ಷಣ ಸಚಿವರಿಗೆ ಪತ್ರವನ್ನು ಬರೆದು ಈ ಕೂಡಲೇ ಬೇಸಿಗೆ ರಜೆಯನ್ನು ನೀಡು ವಂತೆ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀ ಲ್ ಒತ್ತಾಯಿಸಿದ್ದಾರೆ.

ಸಧ್ಯ ರಾಜ್ಯದ ತುಂಬೆಲ್ಲಾ ಕೊರೊನಾ ಸೊಂಕು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಹೀಗಾಗಿ ಸಧ್ಯ ಶೈಕ್ಷಣಿಕ ವ್ಯವಸ್ಥೆಯಲ್ಲೂ ಕೂಡಾ ವ್ಯತ್ಯಾಸ ವಾಗಿದೆ ಹೀಗಾಗಿ ಕೂಡಲೇ ಬೇಸಿಗೆ ರಜೆಯನ್ನು ನೀಡುವಂತೆ ಸ.ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಕೂಡಾ ಆಗ್ರಹ ಮಾಡಿದ್ದಾರೆ

