ಬೆಂಗಳೂರು –
ನೆನಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆಯನ್ನು ತಕ್ಷಣ ಪ್ರಾರಂಭಿಸುವಂತೆ ಹಾಗೂ ಹಲವು ಬೇಡಿಕೆ ಗಾಗಿ ರಾಜ್ಯಾದ್ಯಂತ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಯರ ಸಂಘಟನೆ ಹೋರಾಟ ಆರಂಭ ಮಾಡಿದ್ದಾರೆ
ಶಾಸಕರಿಗೆ ಮನವಿಯನ್ನು ನೀಡುವ ಮೂಲಕ ವಿಳಂಬವಾಗುತ್ತಿರುವ ವರ್ಗಾವಣೆಯನ್ನು ಆರಂಭ ಮಾಡುವಂತೆ ಒತ್ತಾಯವನ್ನು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ ಘಟಕದ ಕೊಪ್ಪಳದ ವಿಭಾಗದ ದವರು ಆಗ್ರಹ ಮಾಡಿದರು
ರಾಜ್ಯಾದ್ಯಂತ ಹೋರಾಟ ಆರಂಭವಾಗಿದ್ದು ಗಂಗಾ ವತಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಪರಣ್ಣ ಮುನವಳ್ಳಿ ಅವರನ್ನು ಕರ್ನಾ ಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ , ಧಾರವಾಡ , ತಾಲೂಕು ಘಟಕ ಗಂಗಾವತಿ ವತಿಯಿಂದ ಶಾಸಕರನ್ನು ಬೇಟಿಮಾಡಿ ಮನವಿ ನೀಡಿದರು
ಪ್ರಮುಖವಾಗಿ ನೆನಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆಯನ್ನು 25% ಖಾಲಿಹುದ್ದೆ ನಿಯಮ ಜೊತೆ ಅವೈಜ್ಞಾನಿಕ ನಿಯಮಗಳನ್ನು ಕೈಬಿಟ್ಟು ಕೂಡಲೇ ಪ್ರಾರಂಭಿಸುವಂತೆ ಮಾನ್ಯ ಸುರೇಶ ಕುಮಾರ್ ಶಿಕ್ಷಣ ಸಚಿವರನ್ನು ಒತ್ತಾಯಿಸುವಂತೆ ವಿನಂತಿಸಲಾಯಿತು
ವರ್ಗಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಸುಮಾ ರು 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರಿಗೆ ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಭಾಗ್ಯ ನೀಡುವಂತೆ ಒತ್ತಾಯವನ್ನು ಮಾಡಿದರು
NPS ರದ್ದು ಮಾಡಿ OPS ಜಾರಿ
ಇದರ ಜೊತೆಗೆ ಬಜೆಟ್ ನಲ್ಲಿ ಮಂಡಿಸಲಾದ ಶಿಶುಪಾಲನೆ ರಜೆಯ ನೂತನ ಆದೇಶ ತಕ್ಷಣ ಹೊತಡಿಸುವುದು & C & R ನಿಯಮದ ತಿದ್ದುಪಡಿ ಮಾಡಿ ಸೇವಾನೀರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸುವುದು. ಹಾಗೂ ಮಹಿಳೆ ಶಿಕ್ಷಕಿಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹ ಮಾಡಿದರು
ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಶಾಲಾ ಅವಧಿ ಬೆಳಗ್ಗೆ ಮಾಡುವಂತೆಯೂ ಶಿಕ್ಷಕಿಯರು ಒತ್ತಾಯವನ್ನು ಮಾಡಿದರು
ಹೀಗೆ ಇನ್ನೂ ಹಲವಾರು ಬೇಡಿಗಳ ಕುರಿತು ಸುಮಾ ರು ಎರಡು ಪುಟಗಳ ಮನವಿಯನ್ನು ಗಂಗಾವತಿ ತಾಲೂಕು ಘಟಕದ ಅಧ್ಯಕ್ಷರು ಆದ ಶ್ರೀಮತಿ K L ಜಯಲಕ್ಷೀ ತಾಲೂಕು ಪ್ರಧಾನ ಕಾರ್ಯದರ್ಶಿಗಳಾ ದ ಶ್ರೀಮತಿ ಮಾಲಾ ಶ್ರೀಧರ ,
ಕೋಶಾಧ್ಯಕ್ಷರು ಜ್ಯೋತಿ ಸಜ್ಜದ್ , ಸಂ.ಕಾ.ಶ್ರೀಮತಿ ಸಂಗಮ್ಮ ಹೀರೇಮಠ, ಕುಮಾರಿ ಅಂಭಿಕಾ ಮುತ್ತು ಕಳಸ ಗೊಂಡ ಜಿಲ್ಲಾ ಅಧ್ಯಕ್ಷರು NPS ನೌ.ಸಂಘ ಕೊಪ್ಪಳ, ಹಾಗೂ ಶ್ರೀ ಶ್ರೀಧರ T ಸಂ .ಕಾರ್ಯದರ್ಶಿ NPS ನೌ.ಸಂಘ ಗಂಗಾವತಿ ಹಾಗೂ ಸಂಘದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು