ಚಿಕ್ಕಮಗಳೂರು –
ಕೊರೋನಾ ಸೋಂಕಿನ ಪ್ರಕರಣಗಳ ಹಿನ್ನಲೆಯಲ್ಲಿ ಈಗಾಗಲೇ ಅನೇಕ ರಾಜ್ಯಗಳು ವಿವಿಧ ಪರೀಕ್ಷೆ ಗಳನ್ನು ರದ್ದು ಪಡಿಸಿವೆ. ಜೊತೆಗೆ ಕೆಲ ಪರೀಕ್ಷೆಗಳನ್ನು ಮುಂದೂಡಿಕೆ ಸಹ ಮಾಡಲಾಗಿದೆ. ಇಂತಹ ಸಂದ ರ್ಭದಲ್ಲಿ ರಾಜ್ಯದಲ್ಲಿನ 1 ರಿಂದ 9ನೇ ತರಗತಿ ಪರೀಕ್ಷೆ ಕುರಿತಂತೆ ಇನ್ನೇರೆಡು ದಿನಗಳಲ್ಲಿ ಅಂತಿಮ ತಿರ್ಮಾ ನವನ್ನು ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದರು.

ಚಿಕ್ಕಮಗಳೂರು ನಲ್ಲಿ ಮಾತನಾಡಿದ ಅವರು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆದು ಚರ್ಚಿಸಿ ದ್ದೇವೆ,ನಾವು ಒಂದು ಹಂತಕ್ಕೆ ಬಂದಿದ್ದೇವೆ.ಇನ್ನೆ ರಡು ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು

ಇನ್ನೆರಡು ದಿನದಲ್ಲೇ ಶಿಕ್ಷಣ ಇಲಾಖೆ ತೀರ್ಮಾನ ಪ್ರಕಟಿಸಲಿದೆ ಎಂದಿದ್ದಾರೆ.ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. 1 ರಿಂದ 9ನೇ ತರಗತಿ ಪರೀಕ್ಷೆ ನಡೆಸೋ ವಿಚಾರ ಕುರಿತಂತೆ ಇನ್ನೆರಡು ದಿನಗಳಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊ ಳ್ಳಲಾಗುತ್ತದೆ. ರಾಜ್ಯದಲ್ಲಿ ಪರೀಕ್ಷೆ ನಡೆಸಬೇಕೇ ಬೇಡವೇ ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳ ಲಾಗುತ್ತದೆ ಎಂದರು