ಧಾರವಾಡ –
ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿ ಪರೀಕ್ಷೆ ನಡೆಸುತ್ತಿದ್ದ ಕೇಂದ್ರದ ಮೇಲೆ ಧಾರವಾಡ ದಲ್ಲಿ ಪೊಲೀಸರು ದಾಳಿ ಮಾಡಿ ದೂರು ದಾಖಲು ಮಾಡಿಕೊಂಡಿದ್ದಾರೆ.
ಹೌದು ಕೊರೋನಾ ಆರ್ಭಟ ಹಿನ್ನಲೆಯಲ್ಲಿ ಸಧ್ಯ ಗುಂಪು ಸೇರೋದಕ್ಕೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಹೀಗಿದ್ದೂ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಪರೀಕ್ಷೆ ನಡೆಸಲು ಮುಂದಾ ಗಿತ್ತು ಇದನ್ನು ತಿಳಿದ ಧಾರವಾಡದ ಉಪನಗರ ಪೊಲೀಸರು ಆಗಮಿಸಿ ಪರೀಕ್ಷೆ ಸ್ಥಗಿತಗೊಳಿಸಿ ಆಯೋಜಕರ ವಿರುದ್ಧ ದೂರನ್ನು ದಾಖಲು ಮಾಡಿದ್ದಾರೆ
ಹೌದು ಧಾರವಾಡ ನಗರದ ಶ್ರೀನಗರ ವೃತ್ತದಲ್ಲಿರುವ ವಿದ್ಯಾಕಾಶಿ ಕರಿಯರ್ ಅಕಾಡೆಮಿ ಸಂಸ್ಥೆಯೊಂದು, ಕೊರೋನಾ ಮಾರ್ಗಸೂಚಿಯನ್ನು ಗಾಳಿಗೆ ತೂರಿ, ಇಂದು ಪರೀಕ್ಷೆ ಬರೆದರೆ ಅದರಲ್ಲಿ ರ್ಯಾಂಕ್ ಬಂದ ರೆ ಬಹುಮಾನ ನೀಡಲಾಗುವುದು ಎಂಬುದಾಗಿ ಪ್ರಚಾರ ನಡೆಸಿತ್ತು. ಇದರಿಂದಾಗಿ ಕೊರೋನಾ ನಿಯಮವನ್ನು ಮೀರಿ ನೂರಾರು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಆಗಮಿಸಿದ್ದರು.
ಖಾಸಗಿ ಶಿಕ್ಷಣ ಸಂಸ್ಥೆಯ ಮೇಲೆ ಉಪನಗರ ಪೊಲೀಸ್ ಅಧಿಕಾರಿಗಳಾದ ಶ್ಯಾಮರಾವ್ ಸಜ್ಜನ,ಶ್ರೀಮಂತ ಹುಣಸಿಕಟ್ಟಿ ಮತ್ತು ಪೊಲೀಸರು, ಕೊರೋನಾ ನಿಯಮ ಉಲ್ಲಂಘಿಸಿ ಪರೀಕ್ಷೆ ನಡೆಸುತ್ತಿದ್ದಂತ ಸಂಬಂಧ ಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲದೇ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಪರೀಕ್ಷೆಗೆ ಹಾಜರಾಗಿದ್ದಂತ ವಿದ್ಯಾರ್ಥಿ ಗಳನ್ನು ದಾಳಿಯ ಮೂಲಕ ಪರೀಕ್ಷೆ ಸ್ಥಗಿತಗೊಳಿಸಿ, ವಿದ್ಯಾಕಾಶಿ ಕರಿಯರ್ ಅಕಾಡೆಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.