ಅನಗತ್ಯ ಹುದ್ದೆಗಳ ರದ್ದತಿ ಗೆ ಸಂಪುಟ ಉಪ ಸಮಿತಿಯಲ್ಲಿ ಮಹತ್ವದ ತೀರ್ಮಾನ‌ ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ ವರದಿ…..

Suddi Sante Desk

ಬೆಂಗಳೂರು –

ಸರ್ಕಾರಕ್ಕೆ ಬಿಳಿಯಾನೆ ಯಂತೆ ಆಗಿರುವ ವಿವಿಧ ಇಲಾಖೆ ಗಳಲ್ಲಿರುವ ಅನಗತ್ಯ ಹುದ್ದೆಗಳನ್ನು ರದ್ದು ಮಾಡುವುದು ಮತ್ತು ಇಲಾಖೆಗಳ ವಿಲೀನಕ್ಕೆ ಸಂಬಂಧಿಸಿದಂತೆ ಸಂಪುಟ ಉಪಸಮಿತಿಯಲ್ಲಿ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.ರಾಜ್ಯದಲ್ಲಿ ಈಗ ಇರುವ ನಾಲ್ಕು ವಿಭಾಗೀಯಾಧಿಕಾರಿ ಹುದ್ದೆಗಳನ್ನು ರದ್ದು ಮಾಡುವುದು, ಜಿಲ್ಲೆಗೆ ಒಬ್ಬ ಡಿಸಿಎಫ್‌ ಮಾತ್ರ ನೇಮಿಸುವುದು. ಈಗ ಕೆಲವು ಜಿಲ್ಲೆಗಳಲ್ಲಿ 3 ರಿಂದ 4 ನಾಲ್ಕು ಡಿಸಿಎಫ್‌ಗಳಿದ್ದಾರೆ ಅಷ್ಟು ಡಿಸಿಎಫ್‌ಗಳ ಅಗತ್ಯವಿಲ್ಲ.ಅಧಿಕಾರಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಫಾರೆಸ್ಟರ್‌ಗಳನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು

ಕೃಷಿ ಇಲಾಖೆಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಯನ್ನು ವಿಲೀನಗೊಳಿಸುವುದು,ಅರಣ್ಯ ಇಲಾಖೆಯಲ್ಲಿ ಇರುವ ಮೂರು ಮಂಡಳಿಗಳನ್ನು ರದ್ದು ಮಾಡಿ ಒಂದು ಮಂಡಳಿಯನ್ನು ಮಾತ್ರ ಉಳಿಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.ಅಲ್ಲದೆ, ಕೆಲವು ಜಿಲ್ಲೆಗಳಲ್ಲಿ ಅಭಿವೃ ದ್ಧಿಗಾಗಿ ಹಲವು ಮಂಡಳಿಗಳನ್ನು ರಚಿಸಲಾಗಿದೆ. ಒಂದಕ್ಕಿಂ ತ ಹೆಚ್ಚು ಮಂಡಳಿಗಳು ಇದ್ದರೆ ಅವುಗಳನ್ನು ರದ್ದು ಮಾಡಿ ಒಂದನ್ನು ಮಾತ್ರ ಉಳಿಸಿಕೊಳ್ಳುವುದು ಸೂಕ್ತ ಎಂದು ತೀರ್ಮಾನಿಸಲಾಯಿತು.ಬೆಂಗಳೂರಿನ ಸುತ್ತಮುತ್ತ ರಾಮನಗರ,ಮಾಗಡಿ,ಆನೇಕಲ್‌,ದೇವನಹಳ್ಳಿ ಅಭಿವೃದ್ಧಿ ಮಂಡಳಿಗಳಿವೆ.ರಾಮನಗರ ಮತ್ತು ಮಾಗಡಿ ಮಂಡಳಿಗ ಳನ್ನು ಒಂದು ಮಾಡಬಹುದು.ಜಿಲ್ಲೆಗೆ ಒಂದು ಅಭಿವೃದ್ಧಿ ಮಂಡಳಿ ಇದ್ದರೆ ಸಾಕಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಇದೇ ರೀತಿ ಬೆಂಗಳೂರಿನಲ್ಲೂ ಹಲವು ಮಂಡಳಿಗಳು ಇವೆ.ಅವುಗಳನ್ನು ಬಿಎಂಎಆರ್‌ಡಿಯಲ್ಲಿ ವಿಲೀನಗೊಳಿ ಸುವ ಬಗ್ಗೆಯೂ ಸಲಹೆ ಕೇಳಿ ಬಂದಿತು.ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯಲ್ಲಿರುವ ಆಡಳಿತ ಸುಧಾರಣೆ ವಿಭಾಗದಲ್ಲಿರುವ ಮನೀಷ್ ಮೌದ್ಗಿಲ್‌ ಅವರು ತಮಗೆ ಇಲ್ಲಿ ಕೆಲಸವೇ ಇಲ್ಲ.ಈ ವಿಭಾಗದ ಅಗತ್ಯವೇ ಇಲ್ಲ ಎಂದು ಹೇಳಿದರು.ಅದೇ ರೀತಿ ವಾರ್ತಾ ಇಲಾಖೆಯೂ ಅನುತ್ಪಾದಕವಾಗಿದ್ದು ಇಲ್ಲೂ ಕೆಲವು ಸುಧಾರಣೆ ಮಾಡಲು ಸಲಹೆಗಳು ಸಭೆಯಲ್ಲಿ ಕೇಳಿ ಬಂದಿದೆ ಎಂದರು.ಹಿಂದೆ ಅನಗತ್ಯವಾಗಿ ಹಲವು ಮಂಡಳಿ, ವಿಭಾಗ,ಇಲಾಖೆಗಳು ಮತ್ತು ಹುದ್ದೆಗಳನ್ನು ಸೃಷ್ಟಿಸಲಾ ಗಿತ್ತು.ಈಗ ಇವು ಆರ್ಥಿಕವಾಗಿ ಹೊರೆಯಾಗಿ ಪರಿಣಮಿ ಸಿವೆ.ಯಾವುದನ್ನು ರದ್ದು ಮಾಡಬೇಕು,ಯಾವುದನ್ನು ವಿಲೀನಗೊಳಿಸಬೇಕು ಎಂಬ ಬಗ್ಗೆ ಮಧ್ಯಂತರ ವರದಿ ಯನ್ನು ಮುಖ್ಯಮಂತ್ರಿಯವರಿಗೆ ನೀಡಿ, ಜಾರಿಗೊಳಿಸಲು ಸಲಹೆ ನೀಡಲಾಗುವುದು ಎಂದೂ ಅಶೋಕ ಹೇಳಿದರು. ಅನಗತ್ಯ ಹುದ್ದೆಗಳನ್ನು ರದ್ದು ಮಾಡುವ ಬಗ್ಗೆ ಅಧಿಕಾರಿಗಳ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಅದಕ್ಕೆ ಸೊಪ್ಪು ಹಾಕುವ ಪ್ರಶ್ನೆಯೇ ಇಲ್ಲ.ಸರ್ಕಾರದ ಹೊರೆ ತಗ್ಗಿಸುವುದು ಎಲ್ಲ ಸಿಬ್ಬಂದಿ ಮತ್ತು ನೌಕರರಿಗೂ ಕೆಲಸ ಇರಬೇಕು.ಕೆಲಸ ಮಾಡದೇ ಯಾರೂ ಕೂರಬಾರದು ಎಂದು ಅವರು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.